ಬೆಂಗಳೂರು(ಆ.09): ಮೊದಲೆಲ್ಲಾ ಮಹತ್ತರ ರಾಜಕೀಯ ನಿರ್ಣಯಗಳಾದಾಗ ಜನ ಪತ್ರಿಕೆಗಳನ್ನು ಹಿಡಿದು, ಚಾ ಹೀರುತ್ತಾ ಮನೆಯಲ್ಲಿ ಸಾರ್ವಜನಿಕ ಕಟ್ಟೆಗಳಲ್ಲಿ ಹರಟುತ್ತಾ ಚರ್ಚೆ ನಡೆಸುತ್ತಿದ್ದರು. 

ಕಾಲ ಬದಲಾಗಿದೆ. ಇದು ಸೋಶಿಯಲ್ ಮಿಡಿಯಾ ಜಮಾನಾ. ರಾಜಕೀಯವೊಂದೇ ಅಲ್ಲ, ಸಮಾಜದ ಎಲ್ಲ ಆಗುಹೋಗುಗಳ ಕುರಿತು ಯುವ ಸಮುದಾಯ ಈಗ ಬೇಗ ಪ್ರತಿಕ್ರಿಯೆ ನೀಡುತ್ತದೆ. 

ಅದರಲ್ಲೂ ಹೇಳಿ ಕೇಳಿ ಇದು ಟ್ರೋಲ್’ಗಳ ಜಮಾನಾ. ಟ್ರೋಲ್ ಜಗತ್ತು ಯಾರನ್ನೂ ಬಿಡುವುದಿಲ್ಲ. ಅದರಲ್ಲೂ ದೇಶದ ವಿಷಯಕ್ಕೆ ಬಂದರೆ ಯುವ ಸಮುದಾಯ ಟ್ರೋಲ್’ಗಳ ಮೂಲಕವೇ ವಿರೋಧಿಗಳ ಬಾಯಿ ಮುಚ್ಚಿಸುತ್ತದೆ.

ಅದರಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಕ್ರಮದಿಂದಾಗಿ ಪಾಕಿಸ್ತಾನ ಹೈರಾಣಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

"

ಕಾಶ್ಮೀರ ವಿಷಯವನ್ನೇ ಉಸಿರಾಡುತ್ತಿದ್ದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ನಿಡಿದ ಗುದ್ದು ತಡೆಯಲಾಗುತ್ತಿಲ್ಲ. ಜಾಗತಿಕ ಅಪಮಾನ ಮತ್ತು ಆಂತರಿಕ ಒತ್ತಡ ತಡೆಯಲಾರದೇ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಲುಗಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ‘ಓಪಿನಿಯನ್ ಪೋಸ್ಟ್’ ಎಂಬ ಡಿಜಿಟಲ್ ಮಾಧ್ಯಮವೊಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಮಾಷೆಯ ವಿಡಿಯೋದಿಂದ ಟ್ರೋಲ್ ಮಾಡಿದೆ.

ಆರ್ಟಿಕಲ್ 370 ರದ್ದತಿಯಿಂದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪರಿಸ್ಥಿತಿಯ ಕುರಿತು ತಮಾಷೆಯಾಗಿ ಈ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಯಾವುದೇ ವ್ಯಕ್ತಿಗಳ ಬಗ್ಗೆ ನೇರವಾಗಿ ಹೇಳದಿದ್ದರೂ, ಫೋಟೋಗಳನ್ನು ತೋರಿಸುವ ಮೂಲಕ ಇಮ್ರಾನ್ ಖಾನ್ ಫೋನ್ ಮೂಲಕ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ.

ಈ ವಿಡಿಯೋ ತುಂಬ ತಮಾಷೆಯಾಗಿದ್ದು, ನೀವು ಕೂಡ ಇದನ್ನು ತುಂಬ ತಮಾಷೆಯಾಗಿಯೇ ನೋಡಿ ಎಂಜಾಯ್ ಮಾಡಿ..