ತಾಲಿಬಾನಿಗಳೊಂದಿಗೆ ಪಾಕ್ ದೋಸ್ತಿ: ಯುಎಸ್ ಸೆನೆಟರ್ ಆರೋಪ!
ಪಾಕಿಸ್ತಾನದ ಅಸಲಿ ಮುಖ ಬಯಲು ಮಾಡಿದ ಅಮೆರಿಕ ಸೆನೆಟರ್| ‘ಭಯೋತ್ಪಾದನೆ ಕುರಿತು ಪಾಕಿಸ್ತಾನದ ಮೊಸಳೆ ಕಣ್ಣೀರು’|ಅಮೆರಿಕದ ಡೆಮೊಕ್ರ್ಯಾಟ್ ಸೆನೆಟರ್ ಮ್ಯಾಗಿ ಹಾಸನ್ ಗಂಭಿರ ಆರೋಪ| ‘ಅಫ್ಘಾನಿಸ್ತಾನದಲ್ಲಿ ತಾಲಿಬಾನ್, ಅಲ್ ಖೈದಾ ಸಲಹುತ್ತಿರುವ ಪಾಕಿಸ್ತಾನ’|‘ಅಮೆರಿಕಕ್ಕೆ ಬೆದರಿಕೆಯೊಡ್ಡಿರುವ ಐಸಿಸ್-ಕೆ ಸಂಘಟನೆಗೂ ಪಾಕ್ ನೆರವು’|ಅಫ್ಘಾನ್ ಭಯೋತ್ಪಾದಕ ಸಂಘಟನೆಗಳನ್ನು ಪಾಕ್ ಸಲುಹುತ್ತಿದೆ ಎಂದ ಮ್ಯಾಗಿ ಹಾಸನ್|
ನವದೆಹಲಿ(ಅ.13): ಭಯೋತ್ಪಾದನೆ ವಿರುದ್ಧ ತಮ್ಮದು ನಿತ್ಯ ನಿರಂತರ ಹೋರಾಟ ಎಂದು ಬೊಗಳೆ ಬಿಡುವ ಪಾಕಿಸ್ತಾನಕ್ಕೆ ಅಮೆರಿಕದ ಸೆನೆಟರ್ ಓರ್ವರು ತಪರಾಕಿ ನೀಡಿದ್ದಾರೆ.
ಅಫ್ಘಾನಿಸ್ತಾನ್‌ದಲ್ಲಿ ತಾಲಿಬಾನ್ ಹಾಗೂ ಅಲ್ ಖೈದಾ ಭಯೋತ್ಪಾದಕ ಸಂಘಟನೆಗಳಿಗೆ, ಪಾಕಿಸ್ತಾನ ಹಣಕಾಸಿನ ನೆರವು ನೀಡುತ್ತಿದೆ ಎಂದು ಅಮೆರಿಕದ ಡೆಮೊಕ್ರ್ಯಾಟ್ ಸೆನೆಟರ್ ಮ್ಯಾಗಿ ಹಾಸನ್ ಆರೋಪಿಸಿದ್ದಾರೆ.
ಕಾಬೂಲ್‌ನಲ್ಲಿ ಆಫ್ಘನ್ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಮ್ಯಾಗಿ ಹಾಸನ್, ಆಫ್ಘನ್ ಭವಿಷ್ಯಕ್ಕೆ ಮಾರಕವಾಗಿರುವ ತಾಲಿಬಾನ್ ಹಾಗೂ ಅಲ್ ಖೈದಾ ಸಂಘಟನೆಗಳನ್ನು ಪಾಕಿಸ್ತಾನ ಸಲುಹುತ್ತಿದೆ ಎಂದಿದ್ದಾರೆ.
ಅಫ್ಘಾನಿಸ್ತಾನ್ ದಲ್ಲಿ ಐಸಿಸ್-ಕೆ ಸಂಘಟನೆ ಬೇರೂರುತ್ತಿದ್ದು, ಪಾಕಿಸ್ತಾನ ಈ ಸಂಘಟನೆಯ ಬೆಂಬಲಕ್ಕೂ ನಿಂತಿದೆ. ಅಮೆರಿಕಕ್ಕೆ ಈ ಸಂಘಟನೆಯಿಂದ ಗಂಭೀರ ಬೆದರಿಕೆ ಇದ್ದು, ಇದರ ಅರವಿದ್ದೂ ಪಾಕಿಸ್ತಾನ ಈ ಸಂಘಟನೆಯನ್ನು ಬೆಂಬಲಿಸುತ್ತಿದೆ ಎಂದು ಮ್ಯಾಗಿ ಹರಿಹಾಯ್ದಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವರನ್ನು ಭೇಟಿ ಮಾಡಿ ಚರ್ಚಿಸಿದ ಮ್ಯಾಗಿ ಹಾಸನ್, ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ನೆರವು ನೀಡುತ್ತಿರುವುದು ಇಡೀ ವಿಶ್ವದ ಅರಿವಿಗೆ ಬಂದಿದೆ ಎಂದು ಹೇಳಿದ್ದಾರೆ.