‘ಕಳೆದ ನಾಲ್ಕು ದಶಕಗಳಲ್ಲಿ ಭಾರತ ಮತ್ತು ಆಫ್ಘಾನಿಸ್ತಾನದ ಮೇಲೆ ಮತೀಯ ಜಿಹಾದಿಗಳ ಮೂಲಕ ಯುದ್ಧ ಸಾರಿರುವುದು, ಇದೀಗ ಪಾಕಿಸ್ತಾನಕ್ಕೇ ಮುಳುವಾಗಿದೆ.
ವಾಷಿಂಗ್ಟನ್(ನ.27): ‘ಪಾಕಿಸ್ತಾನ ಹಮ್ಮಿಕೊಳ್ಳುವ ಅಣ್ವಸ್ತ್ರ ಕಾರ್ಯಕ್ರಮಗಳು ಈ ಭಾಗದ ಭದ್ರತೆಗಷ್ಟೇ ಅಪಾಯವಲ್ಲ, ಬದಲಾಗಿ ಸಾಂಪ್ರದಾಯಿಕ ಕದನವನ್ನು ಅಣ್ವಸ್ತ್ರ ಕದನವನ್ನಾಗಿ ರೂಪಿಸುವ ಮಾರ್ಗಗಳಾಗಿವೆ’ ಎಂದು ಅಮೆರಿಕದ ಚಿಂತಕರ ಚಾವಡಿ ಯೊಂದು ಆತಂಕ ವ್ಯಕ್ತಪಡಿಸಿದೆ.
ಅಟ್ಲಾಂಟಿಕ್ ಕೌನ್ಸಿಲ್ ಎಂಬ ಚಿಂತಕರ ಚಾವಡಿಯು ‘2ನೇ ಅಣು ಯುಗದಲ್ಲಿರುವ ಏಷ್ಯಾ’ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಆತಂಕ ಹೊರ ಹಾಕಿದೆ. ‘ಈ ಭಾಗದ ಅಭದ್ರತೆಗೆ ದೊಡ್ಡ, ಸುಧಾರಿತ ಮತ್ತು ವಿಭಿನ್ನತೆಯ ಅಣ್ವಸ್ತ್ರಗಳು ಕಾರಣವಾಗಿವೆ. ಈ ಅಣ್ವಸ್ತ್ರಗಳು ಸುರಕ್ಷಿತವಾಗಿಲ್ಲ ಕಳವು ಆಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಪಾಕಿಸ್ತಾನದ ಭವಿಷ್ಯದ ಸ್ಥಿರತೆ ಬಗೆ ಏನೂ ಹೇಳಲಾಗದು’ ಎಂದು ವರದಿ ಹೇಳಿದೆ.
‘ಕಳೆದ ನಾಲ್ಕು ದಶಕಗಳಲ್ಲಿ ಭಾರತ ಮತ್ತು ಆಫ್ಘಾನಿಸ್ತಾನದ ಮೇಲೆ ಮತೀಯ ಜಿಹಾದಿಗಳ ಮೂಲಕ ಯುದ್ಧ ಸಾರಿರುವುದು, ಇದೀಗ ಪಾಕಿಸ್ತಾನಕ್ಕೇ ಮುಳುವಾಗಿದೆ. ತಾನೇ ಸಾಕಿದ ಉಗ್ರ ರಿಂದ ಪಾಕಿಸ್ತಾನ ಸರ್ಕಾರ ಮತ್ತು ಪಾಕ್ ನಾಗರಿಕ ಸಮಾಜವೇ ದಾಳಿಗೆ ತುತ್ತಾಗುತ್ತಿದೆ’ ಎಂದು ಅದು ತಿಳಿಸಿದೆ.
