ಪಾಕಿಸ್ತಾನ ಹೊಂದಿರುವ ಅಣ್ವಸ್ತ್ರಗಳು ಉಗ್ರರ ಪಾಲಾಗಬಹುದು ಎಂಬ ಭಾರತದ ದಶಕಗಳ ಆತಂಕ ಯಾಕೋ ನಿಜವಾಗುವಂತಿದೆ. 9 ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟಿದೆ. ಅವನ್ನು ಉಗ್ರರು ಕಳ್ಳತನ ಮಾಡುವ ಅಪಾಯವಿದೆ ಎಂದು ಖುದ್ದು ಅಮೆರಿಕ ತಜ್ಞರೇ ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿ(ಸೆ.26): ಪಾಕಿಸ್ತಾನ ಹೊಂದಿರುವ ಅಣ್ವಸ್ತ್ರಗಳು ಉಗ್ರರ ಪಾಲಾಗಬಹುದು ಎಂಬ ಭಾರತದ ದಶಕಗಳ ಆತಂಕ ಯಾಕೋ ನಿಜವಾಗುವಂತಿದೆ. 9 ಸ್ಥಳಗಳಲ್ಲಿ ಪಾಕಿಸ್ತಾನ ತನ್ನ ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟಿದೆ. ಅವನ್ನು ಉಗ್ರರು ಕಳ್ಳತನ ಮಾಡುವ ಅಪಾಯವಿದೆ ಎಂದು ಖುದ್ದು ಅಮೆರಿಕ ತಜ್ಞರೇ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಿರುವ ಭಯೋತ್ಪಾದಕರಿಗೆ ಅಣ್ವಸ್ತ್ರಗಳೇನಾದರೂ ಸಿಕ್ಕರೆ, ಗಂಭೀರ ಅಪಾಯವನ್ನು ಭಾರತೀಯರು ಎದುರಿಸಬೇಕಾಗುತ್ತದೆ. ಯುದ್ಧ ಸಂದ‘ರ್ದಲ್ಲಿ ಬಳಸಲಾಗುವ ಅಣ್ವಸ್ತ್ರ ಸೇರಿದಂತೆ ಎಲ್ಲ ಬಗೆಯ ಪರಮಾಣು ಅಸ್ತ್ರಗಳನ್ನು ಅತ್ಯಂತ ಬಿಗಿಭದ್ರತೆಯಲ್ಲಿ ರಕ್ಷಿಸಿಕೊಳ್ಳಲಾಗುತ್ತಿದೆ ಎಂದು ಮೂರು ದಿನಗಳ ಹಿಂದಷ್ಟೇ ಪಾಕಿಸ್ತಾನ ಪ್ರಧಾನಿ ಶಹೀದ್ ಖಕನ್ ಅಬ್ಬಾಸಿ ಅಮೆರಿಕದಲ್ಲಿ ತಿಳಿಸಿದ್ದರು. ಆದರೆ, ಭಾರತದ ಜತೆ ಸಾಂಪ್ರದಾಯಿಕ ಯುದ್ಧ ನಡೆದಾಗ ಬಳಸಲು ಪಾಕಿಸ್ತಾನ ಇಟ್ಟುಕೊಂಡಿರುವ ಅಲ್ಪದೂರದ ಅಣ್ವಸ್ತ್ರ ಗಳು ಅಪಘಾತಕ್ಕೆ ಒಳಗಾಗುವ ಹಾಗೂ ಭಯೋತ್ಪಾದಕರ ಕೈವಶವಾಗುವ ಅಪಾಯವಿದೆ ಎಂದು ಅಮೆರಿಕ ವಿಜ್ಞಾನಿಗಳ ಒಕ್ಕೂಟದ ವರದಿ ತಿಳಿಸಿದೆ.

ಸಮರ ಭೂಮಿಯಲ್ಲಿ ಬಳಸುವ ಉದ್ದೇಶದಿಂದ ಪಾಕಿಸ್ತಾನ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಅಮೆರಿಕ ಕಳೆದ ತಿಂಗಳಷ್ಟೇ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ ಈ ಅಣ್ವಸ್ತ್ರಗಳು ಉಗ್ರರಿಗೆ ಸಿಕ್ಕಿ, ಅಣ್ವಸ್ತ್ರ ದಾಳಿ- ಪ್ರತಿದಾಳಿಗೆ ಕಾರಣವಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿತ್ತು ಎಂಬುದು ಗಮನಾರ್ಹ.

ಪಾಕಿಸ್ತಾನವು ಹೆಚ್ಚು ದೂರ ಕ್ರಮಿಸುವ ಅಣ್ವಸ್ತ್ರಗಳ ಜತೆಗೆ ಕಡಿಮೆ ದೂರದ ಗುರಿಯನ್ನು ತಲುಪಬಲ್ಲ ಅಣ್ವಸ್ತ್ರಗಳನ್ನು ಉತ್ಪಾದಿಸಿ ವಿಭಾಗೀಯ ಸ್ಥಳಗಳಿಗೆ ರವಾನಿಸಿರುವ ಸಂ‘ವ ಇದೆ. ಆ ಸ್ಥಳಗಳಿಂದ ಅಣ್ವಸ್ತ್ರಗಳನ್ನು ಜೋಡಿಸಿ ರಾಕೆಟ್ ಉಡಾಯಿಸುವ ಜಾಗಕ್ಕೆ ರವಾನಿಸಲಾಗುತ್ತದೆ ಎಂದು ವರದಿ ನೀಡಿರುವ ಅಮೆರಿಕದ ಖ್ಯಾತ ಅಣ್ವಸ್ತ್ರ ತಜ್ಞ ಕ್ರಿಸ್ಟಿನಿನ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಇಂದು ಜಗತ್ತಿಗೆ ಅಣ್ವಸ್ತ್ರ ಬೆದರಿಕೆ ಹಾಕುತ್ತಿರುವ ಉತ್ತರ ಕೊರಿಯಾಗೂ ಪಾಕಿಸ್ತಾನವೇ ಅಣು ತಂತ್ರಜ್ಞಾನ ನೀಡಿತ್ತು. ಪಾಕ್ ಅಣು ಪರೀಕ್ಷೆಯ ರೂವಾರಿ ಎ.ಕ್ಯು. ಖಾನ್ ಅವರೇ ಈ ತಂತ್ರಜ್ಞಾನ ಹಸ್ತಾಂತರಿಸಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಪಾಕಿಸ್ತಾನದ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವಲ್ಲ ಎಂಬ ಭಾವನೆ ಮೊದಲಿಂದ ಇದ್ದೇ ಇದೆ. ಅದಕ್ಕೆ ವಿಜ್ಞಾನಿಗಳ ವರದಿ ಪೂರಕವಾಗಿದೆ.