ಮೋದಿ ಅಭಿನಂದನೆಯನ್ನು ಯೋಧ ಅಭಿನಂದನ್ ಎಂದ ಪಾಕ್ ನಿರೂಪಕಗೆ ಟಾಂಗ್| ಟ್ವಿಟರ್‌ನಲ್ಲಿ ಫುಲ್ ಟ್ರೋಲ್
ಇಸ್ಲಾಮಾಬಾದ್[ಮೇ.27]: ಲೋಕಸಭೆಗೆ ಆಯ್ಕೆಯಾದ 353 ಎನ್‌ಡಿಎ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಭಿತ್ತರಿಸಿದ ಪಾಕಿಸ್ತಾನದ ಟೀವಿ ನಿರೂಪಕರೊಬ್ಬರು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟ್ರೋಲ್‌ಗೆ ತುತ್ತಾಗಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಸಂಸದರನ್ನುದ್ದೇಶಿಸಿ ಭಾಷಣ ಮಾಡಿದ್ದ ಮೋದಿ ಅವರು, ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದರು. ಆದರೆ, ಇದನ್ನು ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಎಂದು ಅಪಾರ್ಥ ಮಾಡಿಕೊಂಡಿದ್ದ ಪಾಕಿಸ್ತಾನ ಮಾಧ್ಯಮ, ಭಾರತದ ಚುನಾಣೆಯನ್ನು ಗೆದ್ದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನ್ ಹೆಸರೂ ಇನ್ನೂ ನೆನಪಿದೆ ಎಂದು ವ್ಯಂಗ್ಯವಾಡಿತ್ತು.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ‘ಅಭಿನಂದನ್’ ಎಂಬುದು ವಿಂಗ್ ಕಮಾಂಡರ್ ಹೆಸರಷ್ಟೇ ಅಲ್ಲ. ಹಿಂದಿಯಲ್ಲಿ ಅಭಿನಂದನ್ ಎಂದರೆ ‘ಕೃತಜ್ಞತೆ’ ಎಂದರ್ಥ ಎಂದು ಎಆರ್‌ವೈ ಎಂಬ ಪಾಕಿಸ್ತಾನದ ಟೀವಿ ನಿರೂಪಕನಿಗೆ ಟ್ವೀಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
