Asianet Suvarna News Asianet Suvarna News

ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಲು ಪಾಕ್ ಹಣ! ಇಲ್ಲಿದೆ ಸಾಕ್ಷ್ಯ

ಐಎಸ್‌ಐನ ನಗದು ನೋಂದಣಿ ಪುಸ್ತಕದಲ್ಲಿ ರಾವಲ್ಪಿಂಡಿ (ಐಎಸ್‌ಐನ ಕೇಂದ್ರ ಕಚೇರಿ ಇರುವುದು ಅಲ್ಲೇ) ಹಾಗೂ ಶ್ರೀನಗರ (ಹುರಿಯತ್‌ ಮೂಲ)ದ ನಡುವಣ ಹಣದ ಹರಿವಿನ ಪ್ರಸ್ತಾಪವಿದೆ. ಈ ರೀತಿ ಬಂದ ಹಣ ಅನಂತನಾಗ್‌, ಪುಲ್ವಾಮಾ ಹಾಗೂ ಕುಪ್ವಾರಾ ದಂತಹ ಪ್ರದೇಶಗಳಿಗೆ ಹೋಗುತ್ತಿದೆ. ಹೀಗಾಗಿಯೇ ಆ ಪ್ರದೇಶಗಳಲ್ಲೇ ಕಲ್ಲು ತೂರಾಟದಂತಹ ಪ್ರಕರಣಗಳು ಹೆಚ್ಚಿವೆ.

pak money for stone pelters in kashmir

ನವದೆಹಲಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವವರ ಸಂಖ್ಯೆ ಹೆಚ್ಚುತ್ತಿರು ವುದೇಕೆ ಎಂಬ ಪ್ರಶ್ನೆಗೆ ಕಳವಳಕಾರಿ ಉತ್ತರ ಲಭಿಸಿದೆ. ಭದ್ರತಾ ಪಡೆ ಮೇಲೆ ಕಲ್ಲು ತೂರು ವಂತೆ ಕಾಶ್ಮೀರಿ ಯುವಕರ ತಲೆಕೆಡಿಸುತ್ತಿರುವ ಪಾಕಿಸ್ತಾನ, ಕಲ್ಲು ತೂರುವವರಿಗೆ ಭರಪೂರ ಹಣ ಸಂದಾಯ ಮಾಡುತ್ತಿದೆ. ಈಗಾಗಲೇ 70 ಲಕ್ಷ ರು.ಗಿಂತ ಅಧಿಕ ಹಣವನ್ನು ರವಾನಿಸಿದೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಆಂಗ್ಲ ಸುದ್ದಿವಾಹಿನಿ​ಯೊಂದು ವರದಿ ಬಿತ್ತರಿಸಿದೆ. ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್‌ ಕಾನ್ಫರೆನ್ಸ್‌ಗೆ ಹಣ ಬರುತ್ತಿದೆ. ಆ ಹಣವನ್ನು ಹುರಿಯತ್‌ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರ್‌ ಶಾ ಎಂಬಾತ ಹುರಿಯತ್‌ ಜಿಲ್ಲಾ ಘಟಕಗಳಿಗೆ ಹಂಚಿ, ಕಲ್ಲು ತೂರುವವರನ್ನು ಸೆಳೆಯುತ್ತಿದ್ದಾನೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ ಯಾಗಿರುವ ಅಬ್ದುಲ್‌ ಬಾಸಿತ್‌ ತಮಗೆ ಹಣ ನೀಡುತ್ತಿದ್ದರು ಎಂದು ಇತ್ತೀಚೆಗಷ್ಟೇ ಸೆರೆ ಸಿಕ್ಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಏಜೆಂಟ್‌ಗಳಿಬ್ಬರು ತಪ್ಪೊಪ್ಪಿ ಕೊಂಡಿದ್ದರು. ಅದರ ಬೆನ್ನಲ್ಲೇ ಕಲ್ಲು ತೂರುವವರಿಗೆ ಐಎಸ್‌ಐ ಹಣ ಕೊಡುತ್ತಿದೆ ಎಂಬ ಸಂಗತಿ ಅನಾವರಣಗೊಂಡಿರುವುದರಿಂದ, ಭಾರತ ದಲ್ಲಿ ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆ ಪಸರಿಸಲು ಕಾಶ್ಮೀರ ಹಣದ ಹೊಳೆ ಹರಿಸುತ್ತಿದೆ ಎಂಬ ಭಾರತದ ಬಹುಹಿಂದಿನ ವಾದಕ್ಕೆ ತೂಕ ಬಂದಿದೆ.

ರಾವಲ್ಪಿಂಡಿ ಲಿಂಕ್‌: ಹಿಜ್ಬುಲ್‌ ಮುಜಾಹಿ ದೀನ್‌ ಉಗ್ರ ಸಂಘಟನೆ ಕಮಾಂಡರ್‌ ಆಗಿದ್ದ ಬುರ್ಹಾನ್‌ ವಾನಿ 2016ರ ಜುಲೈನಲ್ಲಿ ಭದ್ರತಾ ಪಡೆಗಳಿಂದ ಹತ್ಯೆಯಾದ ಬಳಿಕ ಕಾಶ್ಮೀರದಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ.
ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವ ಸಂಪ್ರದಾಯ ಆರಂಭವಾಗಿದೆ. ದಿನೇದಿನೇ ಇಂಥವರ ಸಂಖ್ಯೆ ಹೆಚ್ಚಾಗುತ್ತಲೂ ಇದೆ. ಈ ಘಟನೆಗಳ ಬೆನ್ನತ್ತಿದ್ದಾಗ ಈ ಸಂಗತಿ ಬಹಿರಂಗವಾಗಿದೆ.

ಐಎಸ್‌ಐನ ನಗದು ನೋಂದಣಿ ಪುಸ್ತಕದಲ್ಲಿ ರಾವಲ್ಪಿಂಡಿ (ಐಎಸ್‌ಐನ ಕೇಂದ್ರ ಕಚೇರಿ ಇರುವುದು ಅಲ್ಲೇ) ಹಾಗೂ ಶ್ರೀನಗರ (ಹುರಿಯತ್‌ ಮೂಲ)ದ ನಡುವಣ ಹಣದ ಹರಿವಿನ ಪ್ರಸ್ತಾಪವಿದೆ. ಈ ರೀತಿ ಬಂದ ಹಣ ಅನಂತನಾಗ್‌, ಪುಲ್ವಾಮಾ ಹಾಗೂ ಕುಪ್ವಾರಾ ದಂತಹ ಪ್ರದೇಶಗಳಿಗೆ ಹೋಗುತ್ತಿದೆ. ಹೀಗಾಗಿಯೇ ಆ ಪ್ರದೇಶಗಳಲ್ಲೇ ಕಲ್ಲು ತೂರಾಟದಂತಹ ಪ್ರಕರಣಗಳು ಹೆಚ್ಚಿವೆ.

ರಾವಲ್ಪಿಂಡಿಯ ಐಎಸ್‌ಐ ಕಚೇರಿಯಲ್ಲಿ ರುವ ಅಹಮದ್‌ ಸಾಗರ್‌ ಎಂಬಾತ ಹುರಿಯತ್‌ ನಾಯಕರು ಅದರಲ್ಲೂ ವಿಶೇಷವಾಗಿ ಶಬ್ಬೀರ್‌ ಶಾ ಜತೆ ನಿರಂತರ ಸಂಪರ್ಕದಲಿದ್ದಾನೆ.

ಪಾಕ್‌'ನಿಂದ ಬಂದ ಹಣವನ್ನು ವಿವಿಧ ಜಿಲ್ಲಾ ಕಚೇರಿಗಳಿಗೆ ವಿತರಿಸುವ ಶಾ, ಕಲ್ಲು ತೂರುವ ಕೆಲಸಕ್ಕೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದಾನೆ. ಅಹಮದ್‌ ಸಾಗರ್‌ ಭಾರತದಲ್ಲಿನ ಪಾಕ್‌ ರಾಯಭಾರಿ ಅಬ್ದುಲ್‌ ಬಾಸಿತ್‌ ನಿಕಟವರ್ತಿ ಯಾಗಿದ್ದಾನೆ ಎಂದು ವರದಿ ತಿಳಿಸಿದೆ.

epaper.kannadaprabha.in

Follow Us:
Download App:
  • android
  • ios