ಲವ್ ಜಿಹಾದ್ ಗೆ ಪಾಕ್ ಇಂಬು?: ಭಾರತೀಯರ ಮಹಿಳೆಯರೇ ಟಾರ್ಗೆಟ್!

First Published 19, Jul 2018, 3:25 PM IST
Pak Man Answered Matrimonial Site As Indian, Mumbai Woman Caught On
Highlights

ಲವ್ ಜಿಹಾದ್ ಗೆ ಪಾಕ್ ಇಂಬು?

ಭಾರತೀಯ ಮಹಿಳೆಯರೇ ಟಾರ್ಗೆಟ್?

ಭಾರತೀಯ ಪ್ರಜೆ ಎಂದು ಸುಳ್ಳು ಬೇರೆ ಹೇಳ್ತಾರೆ

ಮುಂಬೈ ಮೂಲದ ಯುವತಿಗೆ ಭಾರೀ ಮೋಸ

ಪಾಕ್ ಪ್ರಜೆ ವಿರುದ್ಧ ದೂರು ದಾಖಲು

ಮುಂಬೈ(ಜು.19): ಮ್ಯಾಟ್ರಿಮೋನಿಯಲ್ ಸೈಟ್‌ವೊಂದರಲ್ಲಿ ಪಾಕ್ ಪ್ರಜೆಯೊಬ್ಬ ತಾನು ನಾಗ್ಪುರದ ವ್ಯಕ್ತಿ ಎಂದು ಸುಳ್ಳು ಹೇಳಿ ಮುಂಬೈ ಮೂಲದ ಯುವತಿಗೆ ಮದುವೆ ಪ್ರಪೋಸಲ್ ಇಟ್ಟಿರುವ ಘಟನೆ ನಡೆದಿದೆ. ತಾನು ನಾಗ್ಪುರದ ನಿವಾಸಿಯಾಗಿದ್ದು, ಲಂಡನ್‌ನಲ್ಲಿ ವೈದ್ಯನಾಗಿರುವುದಾಗಿ ಸುಳ್ಳು ಹೇಳಿರುವ ಈತ, ಸದ್ಯದಲ್ಲೇ ಭಾರತಕ್ಕೆ ಮರಳಿ ಬಂದು ನೆಲೆಸುವುದಾಗಿ ಹೇಳಿಕೊಂಡಿದ್ದ.

ಈತನ ಹಿನ್ನೆಲೆ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ಬಯಸಿದ ಯುವತಿ, ಆತ ಹೇಳಿದ ಲಂಡನ್‌ನ ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿದಾಗ ಆತ ಅಲ್ಲಿನ ಉದ್ಯೋಗಿ ಅಲ್ಲ ಎಂಬುದು ಗೊತ್ತಾಗಿದೆ. ಅಲ್ಲದೇ ಆತ ವಾಟ್ಸಪ್ ಮೂಲಕ ಕಳುಹಿಸಿದ್ದ ಫೋಟೋಗಳ ಕುರಿತು ವಿಚಾರಣೆ ನಡೆಸಿದಾಗ ಆತನ ಗೆಳೆಯನಿಂದ ಆತ ಪಾಕಿಸ್ತಾನಿ ಪ್ರಜೆ ಎಂಬ ಮಾಹಿತಿ ಗೊತ್ತಾಗಿದೆ. ಅಷ್ಟೇ ಅಲ್ಲದೇ ಆತನಿಗೆ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳು ಕೂಡ ಇದ್ದಾರೆ ಎಂಬ ಆಘಾತಕಾರಿ ಅಂಶ ಕೂಡ ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲದೇ ಈ ಪಾಕಿಸ್ತಾನಿ ಪ್ರಜೆ ಈ ಹಿಂದೆಯೂ ಹಲವು ಯುವತಿಯರಿಗೆ ಇದೇ ರೀತಿ ಮೋಸ ಮಾಡಿರುವ ಅಂಶ ಕೂಡ ಬೆಳಕಿಗೆ ಬಂದಿದೆ. ಈ ಕುರಿತು ಯುವತಿ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader