ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಪಾಕ್'ಗೆ ತೆರಳಿದ್ದ ಅವರ ತಾಯಿ ಹಾಗೂ ಪತ್ನಿಯ ಬಳಿ ಅಲ್ಲಿನ ಪತ್ರಕರ್ತರು ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದರು.

ನವದೆಹಲಿ (ಡಿ.28): ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಪಾಕ್'ಗೆ ತೆರಳಿದ್ದ ಅವರ ತಾಯಿ ಹಾಗೂ ಪತ್ನಿಯ ಬಳಿ ಅಲ್ಲಿನ ಪತ್ರಕರ್ತರು ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದರು.

ಈ ವೇಳೆ ಅವರಿಬ್ಬರನ್ನು ಪ್ರಶ್ನೆ ಮಾಡಿದ ರೀತಿಯೂ ಕೂಡ ತೀರಾ ಅಮಾನವೀಯತೆಯಿಂದಲೇ ಕೂಡಿತ್ತು. ಭೇಟಿ ಮಾಡಿ ಹೊರಕ್ಕೆ ಬಂದ ವೇಳೆ ನೀವು ಓರ್ವ ಉಗ್ರನ ತಾಯಿ, ನೀಮಗೆ ಈ ಬಗ್ಗೆ ಹೇಗನ್ನಿಸುತ್ತದೆ ಎಂದೆಲ್ಲಾ ಪತ್ರಕರ್ತರು ಪ್ರಶ್ನಿಸಿದ್ದರು. ಇದಕ್ಕೆಲ್ಲಾ ನೀವು ಉತ್ತರಿಸಬೇಕು ಎಂದು ಹೇಳಿದ್ದರು. 

ಇಂತಹ ಪ್ರಶ್ನೆಗಳನ್ನು ಕೇಳಿ ಕೂಗಾಡಿದ ಪತ್ರಕರ್ತರ ನಡೆಯನ್ನು ಹೊಗಳಿದ್ದು, ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಹೇಳಿತ್ತು.

ಇದರ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ಕೆಲ ಪತ್ರಕರ್ತರು ಪಾಕ್ ನಡೆಯನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಡಾನ್ ಪತ್ರಿಕೆಯ ಪತ್ರಕರ್ತ ಹಸನ್ ಬೆಲಾಲ್ ಜೈದಿ ಇದೊಂದು ಅಮಾನವೀಯಕರವಾದ ನಡೆ ಎಂದಿದ್ದಾರೆ.

Scroll to load tweet…

ಅಲ್ಲದೇ ಇನ್ನೂ ಕೆಲ ಪತ್ರಕರ್ತರು ಕೂಡ ಸಹೋದ್ಯೋಗಿಗಳ ನಡೆಯನ್ನು ಟೀಕಿಸಿದ್ದಾರೆ. ತಹ ಸಿದ್ದಿಕಿ ಎನ್ನುವ ಡಬ್ಲುಐಒಎನ್ ನ್ಯೂಸ್ ಪತ್ರಕರ್ತ ಇದೊಂದು ಅಸಹ್ಯಕರ ನಡೆ ಎಂದು ಹೇಳಿದ್ದಾರೆ.

Scroll to load tweet…
Scroll to load tweet…