ವಾಷಿಂಗ್ಟನ್‌ನಲ್ಲಿ ಚಿಂತಕರ ಚಾವಡಿಯೊಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಐಜಾಜ್‌, ‘ನಮ್ಮ ದೇಶದಲ್ಲಿ ಉಗ್ರರ ಸುರಕ್ಷಿತ ತಾಣಗಳಿಲ್ಲ. ತಾಲಿಬಾನ್‌ ಮುಖಂಡ ಮುಲ್ಲಾ ಒಮರ್‌ ಆಷ್ಘಾ ನಿಸ್ತಾನದಿಂದ ಪಾಕ್‌ಗೆ ಓಡಿ ಬಂದಿಲ್ಲ' ಎಂದು ಹೇಳಿದರು.

ವಾಷಿಂಗ್ಟನ್‌: ಪಾಕಿಸ್ತಾನದಲ್ಲಿ ಉಗ್ರರ ಸುರಕ್ಷಿತ ಅಡಗುತಾಣಗಳೇ ಇಲ್ಲ ಎಂದು ಅಮೆರಿಕದಲ್ಲಿನ ಪಾಕಿಸ್ತಾನಿ ರಾಯಭಾರಿ ಐಜಾಜ್‌ ಅಹ್ಮದ್‌ ಚೌಧರಿ ಆಡಿದ ಮಾತಿಗೆ ಅವರ ಎದುರೇ ಸಭಿಕರು ಗಹಗಹಿಸಿ ನಕ್ಕ ಘಟನೆ ನಡೆದಿದೆ.

ವಾಷಿಂಗ್ಟನ್‌ನಲ್ಲಿ ಚಿಂತಕರ ಚಾವಡಿಯೊಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಐಜಾಜ್‌, ‘ನಮ್ಮ ದೇಶದಲ್ಲಿ ಉಗ್ರರ ಸುರಕ್ಷಿತ ತಾಣಗಳಿಲ್ಲ. ತಾಲಿಬಾನ್‌ ಮುಖಂಡ ಮುಲ್ಲಾ ಒಮರ್‌ ಆಷ್ಘಾ ನಿಸ್ತಾನದಿಂದ ಪಾಕ್‌ಗೆ ಓಡಿ ಬಂದಿಲ್ಲ' ಎಂದು ಹೇಳಿದರು.

ಆಗ ಸಭಿಕರು ಐಜಾಜ್‌ ಮಾತಿಗೆ ನಕ್ಕರು. ಇದರಿಂದ ಮುಜುಗರಗೊಂಡ ಐಜಾಜ್‌, ‘ಇದರಲ್ಲಿ ನಗೋದೇನಿದೆ?' ಎಂದರು.