Asianet Suvarna News Asianet Suvarna News

ಉಗ್ರ ಸೈಯದ್ ಸಲಾವುದ್ದೀನ್ ಬೆಂಬಲಕ್ಕೆ ನಿಂತಿದೆ ಪಾಕ್: ಸಲಾವುದ್ದೀನ್ ಸ್ವಾತಂತ್ರ್ಯ ಹೋರಾಟಗಾರನಂತೆ!

ನಿನ್ನೆ ತಾನೇ ‘ಸೈಯದ್​ ಸಲಾವುದ್ದೀನ್ ಜಾಗತಿಕ ಉಗ್ರ’ ಎಂದು ಅಮೆರಿಕ ಘೋಷಣೆ ಮಾಡಿತ್ತು. ಆದ್ರೆ ಆ ಉಗ್ರನ ಬೆಂಬಲಕ್ಕೆ ಪಾಕ್​ ನಿಂತಿದೆ. ಅಷ್ಟೇ ಅಲ್ಲದೆ ಸೈಯದ್​ ಸಲಾವುದ್ದೀನ್ ಹೋರಾಟಗಾರ ಎಂಬುವುದು ಪಾಕ್​ ವಾದ. ಏಕೆ ಅಂತೀರಾ ಈ ವರದಿ ನೋಡಿ.

Pak Defends Hizbul Chief Syed Salahuddin Designated Global Terrorist By US
  • Facebook
  • Twitter
  • Whatsapp

ನವದೆಹಲಿ(ಜೂ.28): ನಿನ್ನೆ ತಾನೇ ‘ಸೈಯದ್​ ಸಲಾವುದ್ದೀನ್ ಜಾಗತಿಕ ಉಗ್ರ’ ಎಂದು ಅಮೆರಿಕ ಘೋಷಣೆ ಮಾಡಿತ್ತು. ಆದ್ರೆ ಆ ಉಗ್ರನ ಬೆಂಬಲಕ್ಕೆ ಪಾಕ್​ ನಿಂತಿದೆ. ಅಷ್ಟೇ ಅಲ್ಲದೆ ಸೈಯದ್​ ಸಲಾವುದ್ದೀನ್ ಹೋರಾಟಗಾರ ಎಂಬುವುದು ಪಾಕ್​ ವಾದ. ಏಕೆ ಅಂತೀರಾ ಈ ವರದಿ ನೋಡಿ.

ಪಾಕಿಸ್ತಾನ ಗಡಿಯಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಲೇ ಇದೆ.  ಉಗ್ರರ ಕೃತ್ಯಗಳಿಗೆ ಬೆಂಬಲವಾಗಿರುವ ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್​ ಸಲಾವುದ್ದೀನ್​ನನ್ನು  ಅಮೆರಿಕ ಜಾಗತಿಕ ಮಟ್ಟದ ಉಗ್ರ ಎಂದು ನಿನ್ನೆಯಷ್ಟೇ ಘೋಷಣೆ ಮಾಡಿದೆ.  ಆದ್ರೆ ಪಾಕಿಸ್ತಾನ ಮಾತ್ರ ಸೈಯದ್​ ಸಲಾವುದ್ದೀನ್​ ಒಬ್ಬ ಸಾತಂತ್ರ್ಯ ಹೋರಾಟಗಾರ ಅಂತ ಆತನ ಬೆಂಬಲಕ್ಕೆ ನಿಂತಿದೆ.

ಪಾಕಿಸ್ತಾನ ವಾದವೇನು?

ಸೈಯದ್​ ಸಲಾವುದ್ದೀನ್​  ಕಾಶ್ಮೀರದ ಸ್ವತಂತ್ರ್ಯ ಹೋರಾಟಗಾರ , ಅಮೆರಿಕ ಯಾವುದೇ ಘೋಷಣೆ ಮಾಡುವಾಗ  ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು. ಸಲಾವುದ್ದೀನ್ ಜಾಗತಿಕ ಉಗ್ರ ಎನ್ನಲು ಕಾರಣವೇನು? ಎಂಬುವುದನ್ನು ಅಮೆರಿಕ ಬಹಿರಂಗ ಪಡಿಸಬೇಕು ಎಂದು  ಪಾಕಿಸ್ತಾನ ಆಗ್ರಹಿಸಿದೆ

ಇನ್ನು ಪಾಕಿಸ್ತಾನ ಈಗ ಮತ್ತೆ ಉಗ್ರ ಸೈಯದ್​ ಸಲಾವುದ್ದೀನ್​ ಬೆಂಬಲಕ್ಕೆ ನಿಂತಿದೆ. ಸೈಯದ್​ ಸಲಾವುದ್ದೀನ್​ ಕಾಶ್ಮೀರ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾನೆ. ಏಕಾಏಕಿ ಅವರನ್ನು ಜಾಗತಿಕ ಉಗ್ರ ಅಂತ ಘೋಷಣೆ ಮಾಡಿದ್ದು, ಸರಿಯಾದ ನಿರ್ಧಾರವಲ್ಲವೆಂಬುವುದು ಪಾಕ್​ವಾದವಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನ ಮತ್ತೆ ತನ್ನ ಹಳೆಚಾಳಿ ಮುಂದುವರೆಸಿ ಉಗ್ರ ಸೈಯದ್​ ಸಲಾವುದ್ದೀನ್​ ರಕ್ಷಣೆಗೆ ರಣತಂತ್ರ ರೂಪಿಸಿ ಉಗ್ರನ ಬೆಂಬಲಕ್ಕೆ ನಿಂತಿದೆ.

Follow Us:
Download App:
  • android
  • ios