ಉರಿ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಕಲಾವಿದರ ಪರವಾಗಿ ಓಂ ಪುರಿ ಮಾತನಾಡಿದ್ದರು. ಹೀಗಾಗಿ ಅವರನ್ನು

ಮುಂಬೈ(ಏ.18): ಪ್ರಸಿದ್ಧ ವ್ಯಕ್ತಿಗಳು ಸತ್ತಾಗಲೆಲ್ಲಾ ಅವರ ಸಾವಿನ ಹಿಂದೆ ಸಂಚಿನ ಬಗ್ಗೆ ಸಂಶಯಿಸಲಾಗುತ್ತದೆ. ಆದರೆ ಇಲ್ಲೊಂದು ಕತೆ ಕೇಳಿದರೆ ನಿಮಗೆ ಹಾಸ್ಯಾಸ್ಪದವೆನಿಸದಿರದು. ಬಾಲಿವುಡ್‌ನ ಖ್ಯಾತ ನಟ ಓಂ ಪುರಿಯವರ ‘ದೆವ್ವ’ ಮುಂಬೈನ ಅವರ ಮನೆ ಮುಂದೆ ಸುತ್ತಾಡುತ್ತಿದೆ ಎಂದು ಪಾಕಿಸ್ತಾನಿ ಸುದ್ದಿ ವಾಹಿನಿಯ ಆ್ಯಂಕರ್ ಆಮಿರ್ ಲಿಯಾಖತ್ ಎಂಬುವವರು ಹೇಳಿರುವುದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಉರಿ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿ ಕಲಾವಿದರ ಪರವಾಗಿ ಓಂ ಪುರಿ ಮಾತನಾಡಿದ್ದರು. ಹೀಗಾಗಿ ಅವರನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹತ್ಯೆ ಮಾಡಿಸಿದ್ದರು. ಹೀಗಾಗಿ ದೋವಲ್ ವಿರುದ್ಧ ದ್ವೇಷ ಸಾಸಲು ಓಂ ಪುರಿ ದೆವ್ವ ಬಂದಿದೆ ಎಂದು ಬೋಲ್ ನ್ಯೂಸ್ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಲಿಯಾಖತ್ ಹೇಳಿದ್ದರು. ಸುದ್ದಿಯೊಂದಿಗೆ ಜ. 14ರ ಸಿಟಿಟಿವಿ ತುಣುಕನ್ನೂ ಪ್ರದರ್ಶಿಸಲಾಗಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳಾಗಿವೆ.