ಹಬ್ಬ ಆಚರಣೆ ವಿರೋಧವಿಲ್ಲ ಆದರೆ ಶತ್ರು ದೇಶದ ಹಾಡನ್ನು ಇಲ್ಲಿ ಬಳಸಿದ್ದು ಏಕೆ? ಇಷ್ಟೆಲ್ಲ ನಡೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಪಾಕ್ ಸೈನ್ಯದಲ್ಲಿ ಬಳಸೋ ಹಾಡು ಬಳಸಿ ಕಿಡಿಗೇಡಿಗಳು ದೇಶದ್ರೋಹ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಳಗಾವಿ ನಗರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪಾಕಿಸ್ತಾನದ ಸೇನೆಯ ಹಾಡು ಬಳಸುವ ಮೂಲಕ ಪಾಕ್​ ಪರ ಒಲವು ಹೊಂದಿದ್ದಾರೆ ಎಂದು ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ.

ಶತ್ರು ದೇಶದ ಸೈನ್ಯದ ಹಾಡು ಮೆರವಣಿಗೆಯಲ್ಲಿ ಬಳಸಿರುವುದು ಅಕ್ಷಮ್ಯ. ಪಾಕ್ ಪರ ನಿಲುವು ಹೊಂದಿದ ಹಾಡಿಗೆ ಪಾಲಿಕೆ ಸದಸ್ಯರಾದ ಮಾತೀನ್ ಶೇಖ್, ಬಂದಿನವಾಜ್ ಬಾಳೆಕುಂದ್ರಿ, ಅಜಿಂ ಪಟವೇಗಾರ ನೃತ್ಯ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಬ್ಬ ಆಚರಣೆ ವಿರೋಧವಿಲ್ಲ ಆದರೆ ಶತ್ರು ದೇಶದ ಹಾಡನ್ನು ಇಲ್ಲಿ ಬಳಸಿದ್ದು ಏಕೆ? ಇಷ್ಟೆಲ್ಲ ನಡೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಈ ಹಾಡು ಬಳಸಿದವರ ವಿರುದ್ಧ ರಾಷ್ಟ್ರದ್ರೋಹ ಆರೋಪದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ತಕ್ಷಣ ಮೂರು ಜನರನ್ನು ಪೊಲೀಸರು ಬಂಧಿಸಬೇಕು. ಪಾಕಿಸ್ತಾನದ ಹಾಡು ಇಷ್ಟ ಪಡೆದಾದ್ರೆ ಅಲ್ಲಿಗೆ ಹೋಗಲಿ ಎಂದು ರಾಜೀವ ಟೋಪಣವವರ್ ಹೇಳಿದ್ದಾರೆ.