ನವದೆಹಲಿ(ಆ. 05) ಜಮ್ಮು ಮತ್ತು ಕಾಶ್ಮೀರಕ್ಕೆ ಸಮಂಬಂಧಿಸಿದ ದಿಟ್ಟ ನಿರ್ಧಾರವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ.  ಇದೇ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದ ನಟಿ ಮಿಹಿರಾ ಖಾನ್ ಮಾಡಿರುವ ಟ್ವೀಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ.

ನಾವು ಯಾವ ವಿಚಾರದ ಬಗ್ಗೆ ಮಾತನಾಡಬೇಕಿತ್ತೋ ಅದನ್ನು ಮಾತನಾಡದೇ ಸುಮ್ಮನೆ ಕುಳಿತುಕೊಂಡಿದ್ದೇವೆ. ಸ್ವರ್ಗ ಉರಿಯುತಗ್ತಿದೆ...  ಮುಗ್ಧ ಜೀವಗಳು ಕೊನೆಯಾಗುತ್ತಿವೆ.. ಈ ಅರ್ಥದಲ್ಲಿ ಖಾನ್ ಟ್ವೀಟ್ ಮಾಡಿದ್ದು ಕಠಿಣ ಪ್ರತಿಕ್ರಿಯೆ ಎದುರಿಸಬೇಕಾಗಿ ಬಂದಿದೆ.

ನಮ್ಮ ಕಾಶ್ಮೀರ: ಭವಿಷ್ಯಕ್ಕೆ ಇತಿಹಾಸ ಬರೆದ ಮೋದಿ ಸರ್ಕಾರ!

 #Istandwithkashmir #kashmirbleeds ಎಂಬ ಹ್ಯಾಷ್ ಟ್ಯಾಗ್ ಬಳಸಿರುವುದು ಟ್ವಿಟರಿಗರನ್ನು ಕೆರಳಿಸಿದೆ.  ನಿಮ್ಮ ಸಿಟ್ಟು ಕೋಪ-ತಾಪ ಅವರಿವಾಗುತ್ತದೆ.. ಕಾಶ್ಮೀರ ಈಗ ಅಲ್ಲ ಸ್ವಾತಂತ್ರ್ಯದ ಕಾಲದಿಂದಲೂ ಸುಡುತ್ತಿತ್ತು.. ನಿಮ್ಯಾಗೆ ಹೊಟ್ಟೆ ಉರಿ.. ಕಾಶ್ಮೀರ ಭಾರತದ್ದು.. ನಿಮ್ಮ ಮಮನಸ್ಸಿಗೆ ನೆಮ್ಮದಿ ಬೇಕಿದ್ದರೆ ಹನುಮಾನ್ ಚಾಲೀಸಾ ಪಠಿಸಿ... ಹೀಗೆ ಬಗೆಬಗೆಯ ರಿಯಾಕ್ಷನ್ ಗಳು ಮಿಹಿರಾ ಖಾನ್ ಅವರ ಬೆನ್ನು ಬಿದ್ದಿವೆ.