ಮೋದಿ ಗಿಫ್ಟ್ ಹರಾಜು ಮುಕ್ತಾಯ: ಗಾಂಧೀಜಿ ಫೋಟೋ 25 ಲಕ್ಷಕ್ಕೆ ಸೇಲ್| ಮೋದಿಗೆ ನೀಡಲಾಗಿದ್ದ 2772 ಉಡುಗೊರೆಗಳ ಇ-ಹರಾಜು
ನವದೆಹಲಿ[ಅ.26]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದ್ದ ಉಡುಗೊರೆ ರೂಪದ ವಸ್ತುಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಮುಕ್ತಾಯವಾಗಿದೆ. ಮಹಾತ್ಮ ಗಾಂಧೀಜಿ ಅವರ ಜೊತೆಗಿನ ಮೋದಿ ಅವರ ಪೇಂಟಿಂಗ್ ಭರ್ಜರಿ 25 ಲಕ್ಷ ರು.ಗೆ ಬಿಕರಿಯಾಗಿದೆ.
ಮೋದಿಗೆ ನೀಡಲಾಗಿದ್ದ 2772 ಉಡುಗೊರೆಗಳನ್ನು ಇ-ಹರಾಜು ಮೂಲಕ ಮಾರುವ ಪ್ರಕ್ರಿಯೆಯನ್ನು ಸೆ.14ರಂದು ಆರಂಭಿಸಲಾಗಿತ್ತು. ಹರಾಜನಿಂದ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ದೇಣಿಗೆಯಾಗಿ ನೀಡಲಾಗುತ್ತದೆ.
ದೆಹಲಿಯ ಆಧುನಿಕ ಕಲೆಯ ರಾಷ್ಟ್ರೀಯ ಗ್ಯಾಲರಿಯಲ್ಲಿ ಅ. 3ರವರೆಗೂ ಹರಾಜು ನಿಗದಿಯಾಗಿತ್ತಾದರೂ, ಬಳಿಕ ಅದನ್ನು ಬೇಡಿಕೆ ಹೆಚ್ಚಿದ ಕಾರಣ 3 ವಾರ ವಿಸ್ತರಿಸಲಾಗಿತ್ತು.
