ನಿರ್ದೇಶಕ ಕೃಷ್ಣ ಅವರು ತಮ್ಮ ‘ಪೈಲ್ವಾನ್’ ಚಿತ್ರವನ್ನು ಶತಾಯಗತಾಯ ಅಕ್ಟೋಬರ್ ಮೊದಲ ವಾರದಲ್ಲೇ ಚಿತ್ರೀಕರಣ ಶುರು ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟ ಸುದೀಪ್ ಅವರ ಸ್ಟ್ ಲುಕ್ ಬಿಡುಗಡೆ ಮಾಡಿ ಟ್ರೆಂಡ್ ಹುಟ್ಟು ಹಾಕಿದ ಕೃಷ್ಣ, ಈಗ ‘ಪೈಲ್ವಾನ್’ ಚಿತ್ರದ ಶೂಟಿಂಗ್ ಲೊಕೇಷನ್ ಹಾಗೂ ಕಲಾವಿದರ ಆಯ್ಕೆಯಲ್ಲಿ ತೊಡಗಿದ್ದಾರೆ. ಆದರೆ, ಚಿತ್ರದಲ್ಲಿ ಸುದೀಪ್ ಅವರಿಗೆ ಯಾರು ನಾಯಕಿ ಎನ್ನುವ ಪ್ರಶ್ನೆಗೆ ಇನ್ನೂ ಕೃಷ್ಣ ಅವರಿಗೂ ಉತ್ತರ ಸಿಕ್ಕಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಕೃಷ್ಣ ಅವರು ಹುಡುಕಾಟ ಶುರು ಮಾಡಿದ್ದಾರೆ. ‘ಮಾಮೂಲಿ ಸ್ಟಾರ್ ನಟರ ಚಿತ್ರಗಳ ನಾಯಕಿ ಪಾತ್ರದಂತೆ ಇಲ್ಲಿ ನಾಯಕಿ ಇರಲ್ಲ. ಕತೆಯ ಭಾಗವಾಗಿಯೇ ನಾಯಕಿ ಪಾತ್ರ. ನಟನೆಗೆ ಸ್ಕೋಪ್ ಇರುವ ಪಾತ್ರ. ಹೀಗಾಗಿ ಸಮಯ ತೆಗೆದುಕೊಂಡು ಹುಡುಕುತ್ತಿದ್ದೇವೆ. ಒಂದಿಷ್ಟು ನಟಿಯರನ್ನು ಈಗಾಗಲೇ ಸಂಪರ್ಕಿಸಿದ್ದು, ಅವರ ಡೇಟ್ಸ್, ನಮ್ಮ ಡೇಟ್ಸ್ ಹೊಂದಾಣಿಕೆಯಾದರೆ, ಒಂದೇ ವಾರದಲ್ಲಿ ‘ಪೈಲ್ವಾನ್’ ನಾಯಕಿ ಯಾರೆಂಬುದು ಗೊತ್ತಾಗಲಿದೆ’ ಎನ್ನುತ್ತಾರೆ ಕೃಷ್ಣ.

ಕೃಷ್ಣ ಹೇಳಿದ ಪೈಲ್ವಾನ್ ಗುಟ್ಟು 

-ಕರುಣಾಕರ್ ಕ್ಯಾಮರಾ, ಅರ್ಜುನ್ ಜನ್ಯ ಸಂಗೀತ, ರವಿವರ್ಮ ಸಾಹಸ ಸಂಯೋಜನೆಯ ಚಿತ್ರವಿದು. ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ. 

-ಕೆಲವು ಬಾಕ್ಸಿಂಗ್ ದೃಶ್ಯಗಳು ಸೇರಿದಂತೆ ಕ್ಲೆ‘ಮ್ಯಾಕ್ಸ್ ಫೈಟ್‌'ಗೆ ಮಾತ್ರ ವಿದೇಶಕ್ಕೆ ಹೋಗಲಿದೆ ಚಿತ್ರತಂಡ. 

-ಎರಡು ಪ್ರಸಿದ್ಧ ಕ್ರೀಡಾ ಸಂಸ್ಥೆಗಳ ಜತೆ ಮಾತುಕತೆ ಮಾಡಿದ್ದು, ಅವರು ಸುದೀಪ್ ಅವರಿಗೆ ತರಬೇತಿ ನೀಡುವುದಕ್ಕೆ ಬರಲಿದ್ದಾರೆ.