ಕತ್ತರಿ ಪ್ರಯೋಗವಿಲ್ಲದೇ ಪಾಕ್’ನಲ್ಲಿ ಪದ್ಮಾವತ್ ಬಿಡುಗಡೆ

Padmavat Release In Pakistan
Highlights

ಭಾರತದಲ್ಲಿ ಹಲವು ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ಕಾರಣವಾದ ಪದ್ಮಾವತ್ ಚಿತ್ರ ಬಿಡುಗಡೆಗೆ ಪಾಕಿಸ್ತಾನ ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. ಚಿತ್ರದ ಯಾವ ಸನ್ನಿವೇಶಗಳಿಗೂ ಕತ್ತರಿ ಪ್ರಯೋಗ ಮಾಡದೆ, ‘ಯು’ ಪ್ರಮಾಣ ಪತ್ರ ನೀಡಿರುವುದು ವಿಶೇಷ.

ಇಸ್ಲಾಮಾಬಾದ್: ಭಾರತದಲ್ಲಿ ಹಲವು ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ಕಾರಣವಾದ ಪದ್ಮಾವತ್ ಚಿತ್ರ ಬಿಡುಗಡೆಗೆ ಪಾಕಿಸ್ತಾನ ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. ಚಿತ್ರದ ಯಾವ ಸನ್ನಿವೇಶಗಳಿಗೂ ಕತ್ತರಿ ಪ್ರಯೋಗ ಮಾಡದೆ, ‘ಯು’ ಪ್ರಮಾಣ ಪತ್ರ ನೀಡಿರುವುದು ವಿಶೇಷ.

ಈ ಬಗ್ಗೆ ಘೋಷಣೆ ಮಾಡಿರುವ ಇಲ್ಲಿನ ಸೆನ್ಸಾರ್ ಮಂಡಳಿ ಅಧ್ಯಕ್ಷ ಮೊಬಶೀರ್ ಹಸನ್, ‘ಜನರ ವೀಕ್ಷಣೆಗೆ ಅರ್ಹವಾದ ಪದ್ಮಾವತ್ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಲಾಗಿದೆ. ಕಲೆ, ಸೃಜನಾತ್ಮಕತೆ ಮತ್ತು ಮನೋರಂಜನೆ ಬಗ್ಗೆ ಪಾಕಿಸ್ತಾನ ಸಿಬಿಎಸ್‌ಸಿ ಪೂರ್ವಗ್ರಹಪೀಡಿತ ವಾಗಿಲ್ಲ,’ ಎಂದು ಟ್ವೀಟಿಸಿದ್ದಾರೆ.

loader