ನವದೆಹಲಿ: ಕರ್ನಾಟಕದ ನಾಲ್ವರು, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 41 ಮಂದಿ ಗಣ್ಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪದ್ಮ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಲಿದ್ದಾರೆ. 

ಸ್ನೂಕರ್ ವಿಶ್ವಚಾಂಪಿಯನ್ ಪಂಕಜ್ ಅಡ್ವಾಣಿ ಪದ್ಮಭೂಷಣ, ಕನ್ನಡ ಸಾಹಿತಿ ದೊಡ್ಡರಂಗೇ ಗೌಡ, ಸಾಮಾಜಿಕ ಸೇವೆಗಾಗಿ ಸೀತವ್ವ ಜೋಡಟ್ಟಿ, ಸೂಫೀ ಸಂಗೀತಗಾರ ಇಬ್ರಾಹಿಂ ನಬಿ ಸಾಹೇಬ್ ಸುತರ್ ಅವರು ಪದ್ಮಿಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಮುನ್ನ ಸೂಲಗಿತ್ತಿ ನರಸಮ್ಮ, ರುದ್ರಪಟ್ಟಣಂ ಸೋದರರು ಹಾಗೂ ಆರ್. ನಾರಾಯಣ ಸ್ವಾಮಿ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಮಾ.20ರಂದು ಪ್ರದಾನ ಮಾಡಾಗಿತ್ತು.