ರಸ್ತೆ‌ ಮಧ್ಯೆಯ ಡಿವೈಡರ್ ಗ್ರಿಲ್ ನಲ್ಲಿ ಗೂಳಿಯೊಂದು ಸಿಲುಕಿಕೊಂಡು ಗಂಟೆಗಳ ಕಾಲ ಒದ್ದಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಆಹಾರಕ್ಕಾಗಿ ಓಡಾಡುತ್ತಿದ್ದ ಗೂಳಿ ಡಿವೈಡರ್ ಗ್ರೀಲ್`ನಲ್ಲಿ ಕತ್ತು ಸಿಲುಕಿಸಿಕೊಂಡಿದೆ. ಗಂಟೆಗೂ ಹೆಚ್ಚು ಕಾಲ ಗ್ರೀಲ್‌`ನಿಂದ ಹೊರ ಬರಲಾರದೇ ಮೂಖ ಪ್ರಾಣಿ ಹರಸಾಹಸ ಪಟ್ಟಿತು. ಇದನ್ನ ಕಂಡ ಜನರು ಮುಗಿಬಿದ್ದು ಜಮಾಯಿಸಿದರು. ಜನರನ್ನು ಕಂಡ ಗೂಳಿ ಮತ್ತಷ್ಟು ಗಾಬರಿಯಾಗಿತ್ತು. ನಂತರ ಅಲ್ಲಿಯೇ ನೆರೆದಿದ್ದ ಕೆಲ ಜನರು ಗೂಳಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ವಿಜಯಪುರ(ನ.07): ರಸ್ತೆ ಮಧ್ಯೆಯ ಡಿವೈಡರ್ ಗ್ರಿಲ್ ನಲ್ಲಿ ಗೂಳಿಯೊಂದು ಸಿಲುಕಿಕೊಂಡು ಗಂಟೆಗಳ ಕಾಲ ಒದ್ದಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಆಹಾರಕ್ಕಾಗಿ ಓಡಾಡುತ್ತಿದ್ದ ಗೂಳಿ ಡಿವೈಡರ್ ಗ್ರೀಲ್`ನಲ್ಲಿ ಕತ್ತು ಸಿಲುಕಿಸಿಕೊಂಡಿದೆ. ಗಂಟೆಗೂ ಹೆಚ್ಚು ಕಾಲ ಗ್ರೀಲ್`ನಿಂದ ಹೊರ ಬರಲಾರದೇ ಮೂಖ ಪ್ರಾಣಿ ಹರಸಾಹಸ ಪಟ್ಟಿತು. ಇದನ್ನ ಕಂಡ ಜನರು ಮುಗಿಬಿದ್ದು ಜಮಾಯಿಸಿದರು. ಜನರನ್ನು ಕಂಡ ಗೂಳಿ ಮತ್ತಷ್ಟು ಗಾಬರಿಯಾಗಿತ್ತು. ನಂತರ ಅಲ್ಲಿಯೇ ನೆರೆದಿದ್ದ ಕೆಲ ಜನರು ಗೂಳಿಯನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಬಳಿಕ ಸ್ಥಳಕ್ಕೆ ದೌಡಾಯಿಸಿದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ಗ್ರಿಲ್ ಕತ್ತರಿಸಿ ಗೂಳಿಯನ್ನು ಹೊರಗೆ ತರುವ ಪ್ರಯತ್ನ ಮಾಡಿದರು. ಗ್ರಿಲ್ ಕತ್ತರಿಸಿದ ನಂತರ ಬದುಕಿದೆಯಾ ಬಡ ಜೀವವೇ ಎಂದು ಗ್ರಿಲ್ ಮಧ್ಯೆ ಸಿಲುಕಿದ್ದ ಗೂಳಿ ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿತು.
