ಬೆಂಗಳೂರು (ಸೆ.17): ಚಿಕ್ಕಪೇಟೆಯ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಸಂಬಂಧಿಸಿ ಚಿಕ್ಕಪೇಟೆ ಪೊಲೀಸರು ಅಂಗಡಿ ಮಾಲೀಕ ನರೇಂದ್ರ ಎಂಬಾತನನ್ನು ಬಂಧಿಸಿದ್ದಾರೆ.

ವಿಮೆ ಹಣಕ್ಕಾಗಿ ಮಾಲೀಕ ನರೇಂದ್ರನೇ ಅಂಗಡಿಗೆ ಬೆಂಕಿ ಹಚ್ಚಿಸಿದ್ದ ಎಂದು ತಿಳಿದು ಬಂದಿದೆ.

ವ್ಯವಹಾರದಲ್ಲಿ ಒಂದೂವರೆ ಕೋಟಿ ಸಾಲ ಮಾಡಿದ್ದ ನರೇಂದ್ರ ಅದನ್ನು ತೀರಿಸಲು ರೂ.1.80 ಕೋಟಿ ವಿಮೆ ಇರುವ ಎಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ ಹಾಕುವ ಯೋಜನೆ ರೂಪಿಸಿದ್ದಾನೆ. ಅದರಂತೆ ತನ್ನ ಸ್ನೇಹಿತ ಗಜೇಂದ್ರನಿಂದ ಅಂಗಡಿಗೆ ಬೆಂಕಿ ಹಚ್ಚಿಸಿದ್ದಾನೆಂದು ತಿಳಿದುಬಂದಿದೆ.

ಆದರೆ ಅಗ್ನಿ ದುರಂತದಲ್ಲಿ ಗಜೇಂದ್ರ ಸಜೀವ ದಹನವಾಗಿದ್ದ. ಮತ್ತೊಬ್ಬ ಕಾರ್ಮಿಕ ಅರುಣ್​ಗೆ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ. ಗಿರಿನಗರದ ಖಾಸಗಿ ಆಸ್ಪತ್ರೆಯಲ್ಲಿ ಅರುಣ್​ಗೆ ಚಿಕಿತ್ಸೆ