ಚಾಮರಾಜನಗರ :  ಚುನಾವಣೆ ಸಮೀಪಿಸಿದಂತೆ  ನಡೆಯುತ್ತಿದ್ದ   ಅದೃಷ್ಟ  ಸಂಖ್ಯೆಯ ಆಟ ಜೋರಾಗಿದೆ.  ಕೊಳ್ಳೆಗಾಲಕ್ಕೆ  ಬಂದು ರಾಜಕೀಯ ಮುಖಂಡರು ಅದೃಷ್ಟ ಸಂಖ್ಯೆಯ ಆಟಕ್ಕೆ ಇಳಿದಿದ್ದಾರೆ.

ಬ್ಲಾಕ್ ಮ್ಯಾಜಿಕ್’ಗೆ  ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಕೊಳ್ಳೆಗಾಲದಲ್ಲಿ ಗೂಬೆಯನ್ನು ಮುಂದಿಟ್ಟುಕೊಂಡು ಅದೃಷ್ಟದಾಟ ನಡೆಸುತ್ತಿದ್ದಾರೆ. ಚುನಾವಣೆ ಸಮೀಸುತ್ತಿರುವುದರಿಂದ ಎಲ್ಲರಿಗೂ ಕೂಡ ಗೆಲುವಿನ ಹಂಬಲ ಇದ್ದು ಈ ನಿಟ್ಟಿನಲ್ಲಿ ಇಲ್ಲಿ ನಂಬಿಕೆಯನ್ನು ಹುಟ್ಟಿಸಿ  ಗೂಬೆಯನ್ನು ಮಾರಾಟ ಮಾಡುವ ಯತ್ನವೂ ಕೂಡ ನಡೆದಿದೆ.

ಇಲ್ಲಿ ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ  ಇಬ್ಬರು ವ್ಯಕ್ತಿಗಳನ್ನು ಡಿಸಿಬಿಐ ಪೊಲೀಶರು ಬಂಧಿಸಿದ್ದಾರೆ. ಬಂಧಿತರಿಂದ 2.5 ಕೆಜಿ ತೂಕದ ಗೂಬೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ  ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷಾಂತರ ರುಪಾಯಿಗೆ ಗೂಬೆಯನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನುವ ವಿಚಾರವೂ ತಿಳಿದಿದ್ದು, ಅದೃಷ್ಟ ಒಲಿಯುತ್ತದೆ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದವರಿಂದ ಇಲ್ಲಿಗೆ ಬಂದು ರಾಜಕೀಯ ಮುಖಂಡರು ಗೂಬೆಯನ್ನು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.