ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆಯುವುದು ಖಚಿತವಾ ಗುತ್ತಿದ್ದಂತೆಯೇ ಸಿಎಂ ಹುದ್ದೆಗೆ ಟವಲ್ ಹಾಕು ವವರ ಸಂಖ್ಯೆಯೂ ಹೆಚ್ಚತೊಡಗಿದೆ. ‘ಕರ್ನಾಟಕ ದಲ್ಲಿ ಎಚ್.ಡಿ. ಕುಮಾರಸ್ವಾಮಿಯಂಥವರೇ ಮುಖ್ಯಮಂತ್ರಿಯಾದರು. 

ಹಾಗಿದ್ದರೆ ಮುಂಬರುವ ಚುನಾವಣೆಯಲ್ಲಿ ನಾವೇಕೆ ಸಿಎಂ ಆಗಬಾರದು?’ ಎಂದು ಮಜ್ಲಿಸ್ ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಶುಕ್ರವಾರ ಸಭೆಯೊಂದರಲ್ಲಿ ಪ್ರಶ್ನೆ ಎಸೆದರು. 

ಅಕ್ಬರುದ್ದೀನ್‌ರ ಅಣ್ಣ  ಅಸಾದುದ್ದೀನ್ ಒವೈಸಿ ಈ ಪಕ್ಷದ ಅಧ್ಯಕ್ಷ. ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೇ ಕಣಕ್ಕಿಳಿಯಲು ಮಜ್ಲಿಸ್ ಪಕ್ಷ ನಿರ್ಧರಿಸಿದೆ.