ಕೇರಳ ರಾಜ್ಯದ ಮದ್ಯಪ್ರಿಯರಿಗೆ ಇಂದು ಹಬ್ಬವೋ ಹಬ್ಬ. ಹಿಂದಿನ ಯುಡಿಎಫ್ ಸರ್ಕಾರದ ಮದ್ಯ ನೀತಿಯನ್ನು  ಎಡರಂಗ ಸರ್ಕಾರವು ಪುನರ್ ಪರಿಶೀಲಿಸಿದ ಬೆನ್ನಲ್ಲಿ , ಬಾರ್’ಗಳನ್ನು  ತೆರೆಯಲು ಅನುಮತಿ ನೀಡಲಾಗಿದೆ..

ತಿರುವನಂತಪುರಂ (ಜು.02): ಕೇರಳ ರಾಜ್ಯದ ಮದ್ಯಪ್ರಿಯರಿಗೆ ಇಂದು ಹಬ್ಬವೋ ಹಬ್ಬ. ಹಿಂದಿನ ಯುಡಿಎಫ್ ಸರ್ಕಾರದ ಮದ್ಯ ನೀತಿಯನ್ನು ಎಡರಂಗ ಸರ್ಕಾರವು ಪುನರ್ ಪರಿಶೀಲಿಸಿದ ಬೆನ್ನಲ್ಲಿ , ಬಾರ್’ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ..

2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಕೇವಲ 5-ಸ್ಟಾರ್ ಹೋಟೆಲ್’ಗಳಿಗೆ ವಿನಾಯಿತಿ ನೀಡಲಾಗಿತ್ತು.

ಆದರೆ ಆ ನೀತಿಯನ್ನು ಇದೀಗ ಎಡರಂಗ ಸರ್ಕಾರವು ಪುನರ್ ಪರಿಶೀಲಿಸಿದೆ. ಈ ಹಿಂದೆ ಮುಚ್ಚಲಾಗಿದ್ದ ಬಾರ್'ಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ. ಅರ್ಜಿ ಹಾಕಿರುವ ಪೈಕಿ 77 ಬಾರ್’ಗಳಿಗೆ ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ.