Asianet Suvarna News Asianet Suvarna News

ದೇಶದಲ್ಲಿ 16 ಕೋಟಿ ಮದ್ಯ, 3 ಕೋಟಿ ಗಾಂಜಾ ವ್ಯಸನಿಗಳು

ದೇಶದಲ್ಲಿ 16 ಕೋಟಿ ಮದ್ಯ, 3 ಕೋಟಿ ಗಾಂಜಾ ವ್ಯಸನಿಗಳು|  ರಾಜ್ಯಸಭೆಗೆ ಮಾಹಿತಿ ನೀಡಿದ ಸರ್ಕಾರ

Over 16 crore people in the country consume alcohol Over 3 crore use Cannabis
Author
Bangalore, First Published Jul 5, 2019, 10:25 AM IST
  • Facebook
  • Twitter
  • Whatsapp

ನವದೆಹಲಿ[ಜು.05]: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪಾನಿಗಳಿದ್ದು, ನಂತರದ ಸ್ಥಾನದಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಗುರುವಾರ ಮಾಹಿತಿ ನೀಡಿದೆ.

ದೇಶದಲ್ಲಿ 16 ಕೋಟಿ ಮದ್ಯಪಾನಿಗಳಿದ್ದಾರೆ, ಈ ಪೈಕಿ 5.7 ಕೋಟಿ ಜನ ಮದ್ಯದ ಚಟಕ್ಕೆ ತುತ್ತಾಗಿದ್ದಾರೆ. ಇವರಿಗೆ ನೆರವಿನ ಅವಶ್ಯಕತೆ ಇದೆ. ಅದೇ ರೀತಿಯಲ್ಲಿ 3.1 ಕೋಟಿ ಜನ ಗಾಂಜಾಕ್ಕೆ ಮತ್ತು 77 ಲಕ್ಷ ಜನ ಇತರೆ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ.

ದೇಶದ ಎಲ್ಲಾ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆ ಅನ್ವಯ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Follow Us:
Download App:
  • android
  • ios