ಸ್ಪೋಟದ ಬಳಿಕ ಸುಮಾರು 350ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರ ನಿಯಾಬ್ ಹೈದರ್ ಹೇಳಿದ್ದಾರೆ.

ಲಾಹೋರ್(ಫೆ.19): ಪಾಕಿಸ್ತಾನದ ಸೂಫಿ ದರ್ಗಾದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಅಲ್ಲಿನ ಭದ್ರತಾ ಪಡೆಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಮಾರು 130 ಶಂಕಿತ ಉಗ್ರರನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಸುಮಾರು 350ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಬಹುತೇಕರು ಅಫ್ಘಾನಿಸ್ತಾನಿಯರು ಎನ್ನಲಾಗಿದೆ. ಸ್ಪೋಟದ ಬಳಿಕ ಸುಮಾರು 350ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರ ನಿಯಾಬ್ ಹೈದರ್ ಹೇಳಿದ್ದಾರೆ.

ಗುರುತು ಪತ್ರ ಇಲ್ಲದವರು ಮತ್ತು ಅಂಥವರಿಗೆ ಮನೆ ಬಾಡಿಗೆ ನೀಡಿದವರನ್ನೂ ವಶಕ್ಕೆ ಪಡೆಯಲಾಗಿದೆ. ಗುಪ್ತಚರ ಮಾಹಿತಿಗಳ ಆಧಾರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಸಿಐಡಿ ವಕ್ತಾರ ತಿಳಿಸಿದ್ದಾರೆ. ಕೆಲವು ಶಂಕಿತರಿಂದ ಅಕ್ರಮ ಶಸ್ತ್ರಾಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.