ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!
ಭಿಕ್ಷೆ ಬೇಡಿ ಜೀವನ ಸಾಗಿಸುತ್ತದ್ದ ಲಕ್ಷಾಧಿಪತಿ ಭಿಕ್ಷುಕ| ರೈಲು ಹಳಿ ದಾಟುತ್ತಿದ್ದಾಗ ಸಾವನ್ನಪ್ಪಿದ| ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಗುಡಿಸಲು ತಲುಪಿದ ಪೊಲೀಸರಿಗೆ ಕಾದಿತ್ತು ಶಾಕ್
ಮುಂಬೈ[ಅ.07]: ಮುಂಬೈನಲ್ಲಿ ರೈಲು ಹಳಿ ದಾಟುತ್ತಿದ್ದ ವೃದ್ಧನೊಬ್ಬ ಸಾವನ್ನಪ್ಪಿದ್ದಾನೆ. 83 ವರ್ಷದ ಬೀರ್ ಬೀಚಂದ್ ಆಜಾದ್ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ. ಆದರೆ ಆತ ಸಾವನ್ನಪ್ಪಿದ ಬಳಿಕ ಮಾಹಿತಿ ನೀಡಲು ಆತನ ಗುಡಿಸಲು ತಲುಪಿದ ಪೊಲೀಸರಿಗೆ ಭಾರೀ ಅಚ್ಚರಿಯುಂಟಾಗಿದೆ.
ಹೌದು ಆತನ ಕುಟುಮಬಸ್ಥರಿಗೆ ಮಾಹಿತಿ ನೀಡಲು ಗುಡಿಸಲಿಗೆ ತಲುಪಿದ ಪೊಲೀಸರಿಗೆ ಅಲ್ಲಿ ಯಾರೂ ಸಿಗಲಿಲ್ಲ. ಮನೆಯಲ್ಲಿ ಹುಡುಕಾಟ ನಡೆಸಿದಾಗ ಒಂದು ಹಳೆಯ ಹಂಡೆಯಲ್ಲಿ ಕೂಡಿಟ್ಟ ನಾಣ್ಯಗಳು ಹಾಗೂ ಕೆಲ FD ದಾಖಲೆಗಳು ಸಿಕ್ಕಿವೆ. ನಾಣ್ಯಗಳ ಸಂಖ್ಯೆ ಅದೆಷ್ಟಿತ್ತೆಂದರೆ ಮೊತ್ತವೆಷ್ಟು ಎಂದು ಎಣಿಸಲು ಗಂಟೆಗಲೇ ತಗುಲಿವೆ. ಆ ಪುಟ್ಟ ಗುಡಿಸಲಿನಿಂದ ಒಟ್ಟು 1 ಲಕ್ಷದ 77 ಸಾವಿರ ರೂಪಾಯಿ ಮೊತ್ತ ಪೊಲೀಸರು ಕಲೆ ಹಾಕಿದ್ದಾರೆ. ಅಲ್ಲದೇ 8 ಲಕ್ಷ 77 ಸಾವಿರ ರೂಪಾಯಿ ಮೌಲ್ಯದ ಎಫ್ ಡಿ ದಾಖಲೆಗಳೂ ಸಿಕ್ಕಿವೆ.
ಭಿಕ್ಷೆ ಕೇಳಿ ಬಂದವಳು ಚಿನ್ನಾಭರಣ ಎಗರಿಸಿ ಪರಾರಿ!
ರಾಜಸ್ಥಾನ ನಿವಾಸಿ ಬೀರ್ ಬೀಚಂದ್ ಮುಂಬೈನ ಗೋವಂಡಿ ಪ್ರದೇಶದಲ್ಲಿ ರೈಲು ಹಳಿಯ ಬಳಿ ವಾಸಿಸುತ್ತಿದ್ದರು,. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡೇ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗ ಅವರ ಬಳಿ ಇಷ್ಟು ಮೊತ್ತದ ಹಣ ಇರಬಹುದು ಎಂದು ಯಾರೂ ಕೂಡಾ ಊಹಿಸಿರಲಿಲ್ಲ.
ಬೀರ್ ಬೀಚಂದ್ ಆಜಾದ್ ಮನೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಸೀನಿಯರ್ ಸಿಟಿಜನ್ ಕಾರ್ಗಡ್ ಕೂಡಾ ಸಿಕ್ಕಿದೆ. ಮನೆಯಲ್ಲಿ ಪತ್ತೆಯಾದ ದಾಖಲೆಗಳನ್ವಯ GRP ಪೊಲೀಸರು ರಾಜಸ್ಥಾನ ಪೊಲೀಸರ ಬಳಿ ಈ ವೃದ್ಧ ಭಿಕ್ಷುಕನ ಕುಟುಂಬ ಸದಸ್ಯರನ್ನು ಹುಡುಕಾಡಲು ತಿಳಿಸಿದ್ದಾರೆ.