ಹೈಕೋರ್ಟ್ ನಿವೃತ್ತ ಸಿಜೆ ಮನೆಯಲ್ಲಿ ವರದಕ್ಷಿಣೆಗಾಗಿ ಸೊಸೆಯ ಮೇಲೆ ಹಲ್ಲೆ| ಮಗುವಿನ ಎದುರಿನಲ್ಲೇ ಹಲ್ಲೆ ನಡೆಸಿದ ದೃಶ್ಯ ಸಿಸಿ ಟೀವಿಯಲ್ಲಿ ಸೆರೆ
ಹೈದರಾಬಾದ್[ಸೆ.22]: ನ್ಯಾಯಾಧೀಶರಾಗಿದ್ದವರು ಇತರರಿಗೆ ಮಾದರಿಯಾಗಬೇಕು. ಆದರೆ, ಹೈದರಾಬಾದ್‌ನಲ್ಲಿ ತಮಿಳುನಾಡು ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಸೊಸೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು ಹಾಗೂ ಪುಟ್ಟಮಗುವಿನ ಎದುರಿನಲ್ಲೇ ಆಕೆಯ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಸಿಂಧು ಶರ್ಮಾ ಎಂಬಾಕೆಯ ಮೇಲೆ ನ್ಯಾ
ನೂತಿ ರಾಮಮೋಹನ ರಾವ್ (ಮಾವ) ಮತ್ತು ನೂತಿ ದುರ್ಗಾ ಜಯಲಕ್ಷ್ಮಿ (ಅತ್ತೆ) ಮತ್ತು ಪತಿ ನೂತಿ ವಸಿಷ್ಠ ದೈಹಿಕವಾಗಿ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಟೀವಿಯಲ್ಲಿ ಸೆರೆಯಾಗಿದೆ. ಕಳೆದ ಏಪ್ರಿಲ್‌ನಲ್ಲೇ ಈ ಘಟನೆ ನಡೆದಿದಿದ್ದರೂ ಮುಚ್ಚುಹಾಕುವ ಯತ್ನ ನಡೆದಿತ್ತು. ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಿಂಧು ಶರ್ಮಾ ಮನೆಯ ಮುಂದೆ ಪ್ರತಿಭಟನೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಅಳವಡಿಸಿದ್ದ ಸಿಸಿ ಟೀವಿ ದೃಶ್ಯಾವಳಿಗಳು ಇದೀಗ ಬಹಿರಂಗಗೊಂಡಿದ್ದು, ನ್ಯಾ
ರಾಮಮೋಹನ್ ರಾವ್ ಅವರ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
