.

ನವದೆಹಲಿ(ಡಿ.21): ಭಾರತದ 120 ಕೋಟಿ ಜನಸಂಖ್ಯೆಯಲ್ಲಿ ಈ ವರ್ಷ ಆದಾಯ ತೆರಿಗೆ ಪಾವತಿಸಿದವರ ಸಂಖ್ಯೆ 4.07 ಕೋಟಿ ಮಾತ್ರ.
ಆದಾಯ ತೆರಿಗೆ ಇಲಾಖೆ 2015-16 ಸಾಲಿನಲ್ಲಿ ತೆರಿಗೆ ಪಾವತಿಸಿರುವವರ ಬಗ್ಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ವ್ಯಕ್ತವಾಗಿದೆ. 120 ಕೋಟಿಗೂ ಅಧಿಕ ಮಂದಿ ಜನಸಂಖ್ಯೆಯಲ್ಲಿ 5 ರಿಂದ 10 ಕೋಟಿ ಆದಾಯವಿರುವವರ ಸಂಖ್ಯೆ ಕೇವಲ 1 ಸಾವಿರ ಮಾತ್ರ. 
82 ಲಕ್ಷ ಮಂದಿ ಶೂನ್ಯದಿಂದ 2.5 ಲಕ್ಷ ಆದಾಯವಿದ್ದು ಇವರ್ಯಾರು ತೆರಿಗೆ ಪಾವತಿಸಿಲ್ಲ. 1.33 ಕೋಟಿ ಮಂದಿ 2.5 ರಿಂದ 3.5 ಲಕ್ಷ ರೂ. ಅದಾಯ ಹೊಂದಿದ್ದಾರೆ. ತಮ್ಮ ಬಳಿ 1 ಕೋಟಿಗಿಂತ ಅಧಿಕ ಆದಾಯವಿದೆಯೆಂದು ಘೋಷಿಸಿರುವ ಸಂಖ್ಯೆ 59,830 ಮಾತ್ರ. ಆದರೆ ಕಳೆದ ವರ್ಷಕ್ಕಿಂತ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ 9 ಸಾವಿರ ಮಂದಿ ಹೆಚ್ಚಾಗಿದ್ದಾರೆ. ಇವರೆಲ್ಲರ ಒಟ್ಟು ಆದಾಯ 1.54 ಲಕ್ಷ ಕೋಟಿ ರೂ.
55,331 ಮಂದಿಯ ಆದಾಯ 1 ರಿಂದ 5 ಕೋಟಿ ರೂ, 5 ರಿಂದ 10 ಕೋಟಿ ಇರುವವರು 3020 ಮಂದಿ ಹಾಗೂ 10ರಿಂದ 25 ಕೋಟಿ ಆದಾಯವುಳ್ಳವರ ಸಂಖ್ಯೆ 1156. 31 ಮಂದಿಯ ಬಳಿ 100 ರಿಂದ 500 ಕೋಟಿ ಆಸ್ತಿಯಿದೆ. ಕೇವಲ ಒಬ್ಬ ವ್ಯಕ್ತಿ ಮಾತ್ರ 721 ಕೋಟಿ ರೂ. ಹೆಚ್ಚು ಆಸ್ತಿಯಿದೆಯೆಂದು ಘೋಷಿಸಿಕೊಂಡಿದ್ದಾನೆ.