ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶ ಮುಗಿಸಿಕೊಂಡು ಮಯನ್ಮಾರ್’ಗೆ ಇಂದು ಭೇಟಿ ನೀಡಿದ್ದಾರೆ. ಪ್ರಧಾನಿಗೆ ಇದು ಮೊದಲ ‍ಮಯನ್ಮಾರ್  ಭೇಟಿಯಾಗಿದೆ. ಮಯನ್ಮಾರ್ ಕೌನ್ಸಲರ್ ಔಂಗ್ ಸಾನ್ ಸು ಕಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಜಲಗಡಿ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ (ಸೆ.06): ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶ ಮುಗಿಸಿಕೊಂಡು ಮಯನ್ಮಾರ್’ಗೆ ಭೇಟಿ ನೀಡಿದ್ದಾರೆ. ಪ್ರಧಾನಿಗೆ ಇದು ಮೊದಲ ‍ಮಯನ್ಮಾರ್ ಭೇಟಿಯಾಗಿದೆ. ಮಯನ್ಮಾರ್ ಕೌನ್ಸಲರ್ ಔಂಗ್ ಸಾನ್ ಸು ಕಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಜಲಗಡಿ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾಂಗಾನ್’ನಲ್ಲಿರುವ ತುವುನ್ನಾ ಸ್ಟೇಡಿಯಂನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ನಾನಿಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ. ನೀವೆಲ್ಲಾ ಭಾರತದ ಬೇರೆ ಬೇರೆ ಭಾಗಗಳಿಂದ ಬಂದವರಾಗಿದ್ದೀರಿ.ನಿಮ್ಮನ್ನೆಲ್ಲಾ ನೋಡಿ ಬಹಳ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತ ಟೆಕ್ನಾಲಜಿಯತ್ತ ಧಾವಿಸುತ್ತಿದೆ. ನಾವು ಭಾರತವನ್ನು ಕೇವಲ ಸುಧಾರಣೆ ಮಾಡಲು ಬಯಸುತ್ತಿಲ್ಲ ಬದಲಿಗೆ ಪರಿವರ್ತನೆ ಮಾಡಲು ಬಯಸುತ್ತೇವೆ. ನವ ಭಾರತ ನಿರ್ಮಾಣವಾಗುತ್ತಿದೆ. ಸಾರಿಗೆ, ರೈಲ್ವೇ, ಸೋಲಾರ್’ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬಂಡವಾಳ ಹಾಕಲಾಗುತ್ತಿದೆ. 75 ನೇ ಸ್ವಾತಂತ್ರ ದಿನಾಚರಣೆಯಂದು ನವ ಭಾರತ ನಿರ್ಮಾಣಕ್ಕೆ ನಾವು ಪ್ರಮಾಣ ಮಾಡಿದ್ದೇವೆ. ಭಡತನ ಮುಕ್ತ, ಜಾತಿಮುಕ್ತ, ಭಯೋತ್ಪಾದನೆ ಮುಕ್ತ, ಅಸಮಾನತೆ ಮುಕ್ತ ಭಾರತ ನಿರ್ಮಾಣ ಮಾಡಲಿದ್ದೇವೆ.

ವಿದೇಶದಲ್ಲಿ ತೊಂದರೆ ಅನುಭವಿಸುತ್ತಿರುವ ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡುತ್ತಾರೆ. ಜನರು ಟ್ವಿಟರ್’ನಲ್ಲಿ ತಮ್ಮ ಸಮಸ್ಯೆಯೊಂದಿಗೆ ಸುಷ್ಮಾ ಸ್ವರಾಜ್ ಬಳಿ ಬರುತ್ತಾರೆ. ಭಾರತೀಯ ರಾಯಭಾರವು ನಿಮಗೆ ಯಾವಾಗಲೂ ತೆರೆದಿರುತ್ತದೆ.ನಾವು ಸಾಗರೋತ್ತರ ಭಾರತೀಯರಿಗೆ Know India ವನ್ನು ಶುರು ಮಾಡಿದ್ದೇವೆ. ಇದಕ್ಕೂ ಮುನ್ನ ನರೇಂದ್ರ ಮೋದಿ ಆಯಪನ್ನು ಬಳಸಿಕೊಳ್ಳಿ. ಸಾಗರೋತ್ತರ ಭಾರತೀಯರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.