ಅತ್ಯಂತ ವಿರಳವಾದ ರೋಗದಿಂದ ಬಳಲುತ್ತಿದ್ದ ಜೋನಾಥನ್ ಪಿಟ್ರೆ ಎಂಬ ಬಾಲಕ ಮೃತಪಟ್ಟಿದ್ದಾರೆ.
ಕೆನಡಾ : ಅತ್ಯಂತ ವಿರಳವಾದ ರೋಗದಿಂದ ಬಳಲುತ್ತಿದ್ದ ಜೋನಾಥನ್ ಪಿಟ್ರೆ ಎಂಬ ಬಾಲಕ ಮೃತಪಟ್ಟಿದ್ದಾರೆ. ಎಪಿಡರ್ಮೋಲಿಸಿಸ್ ಬುಲ್ಲೋಸಾ ಎನ್ನುವ ರೋಗದಿಂದ ಬಳಲುತ್ತಿದ್ದ 17 ವರ್ಷದ ಬಾಲಕ ಬಗ್ಗೆ ಅನೇಕ ರೀತಿಯಾದ ಅರಿವು ಕಾರ್ಯಕ್ರಮಗಳನ್ನು ನಡೆಸಿದ್ದು, ಇದೀಗ ಈ ರೋಗಕ್ಕೆ ಬಲಿಯಾಗಿದ್ದಾರೆ. ರಸೆಲ್’ನ ಬಾಲಕ ರೋಗಕ್ಕೆ ಅನೇಕ ಕಾಲದಿಂದ ಚಿಕಿತ್ಸೆಯನ್ನೂ ಕೂಡ ಪಡೆದುಕೊಳ್ಳುತ್ತಿದ್ದ.
ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕವಾಗಿ ಈ ರೋಗದ ಬಗ್ಗೆ ಅರಿವು ಕಾರ್ಯಾಗಾರಗಳನ್ನೂ ಕೂಡ ನಡೆಸುತ್ತಿದ್ದ. ತನ್ನ ನಿತ್ಯದ ಹೋರಾಟದ ಬಗ್ಗೆ ಈ ವೇಳೆ ತಿಳಿಸುತ್ತಿದ್ದ. ರೋಗಕ್ಕೆ ಬಟರ್’ಫ್ಲೈ ಡಿಸೀಸ್ ಎಂದೂ ಕೂಡ ಕರೆಯಲಾಗುತ್ತಿತ್ತು. ಕಾರಣ ಚರ್ಮವು ಚಿಟ್ಟೆಯಷ್ಟೇ ಸೂಕ್ಷ್ಮವಾಗಿತ್ತು.
ಈತನ ಕಾರ್ಯಾಗಾರ ಕೇಳಲು ಅನೇಕ ಜನರು ನೆರೆಯುತ್ತಿದ್ದು, ಈತನಿಗೆ ಅತ್ಯಧಿಕ ಪ್ರಮಾಣದಲ್ಲಿ ಫಾಲೊವರ್ಸ್’ಗಳೂ ಕೂಡ ಹುಟ್ಟಿಕೊಂಡಿದ್ದರು. ಇದೀಗ ತನ್ನ 17ನೇ ವಯಸ್ಸಿನಲ್ಲಿ ಇದೇ ರೋಗಕ್ಕೆ ಬಾಲಕ ಬಲಿಯಾಗಿದ್ದಾನೆ.
