Asianet Suvarna News Asianet Suvarna News

ಲಾಡೆನ್ ಪುತ್ರ ಹಮ್ಜಾ ಅಲ್'ಖೈದಾ ಉತ್ತರಾಧಿಕಾರಿ..?

ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಳಿಕ ಹಮ್ಜಾ ತಂದೆಯಿಂದ ಬೇರೆಯಾಗಿದ್ದ. ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

Osama Bin Laden Son May Be Heir To Al Qaeda
  • Facebook
  • Twitter
  • Whatsapp

ಪ್ಯಾರಿಸ್(ಸೆ.20): ಅಮೆರಿಕದ 9/11 ದಾಳಿಗೆ 16 ವರ್ಷ ಆದ ಹಿನ್ನೆಲೆಯಲ್ಲಿ ಅಲ್‌'ಖೈದಾ ಮಾಂಟೇಜ್ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಕಾಣಿಸಿಕೊಂಡಿದ್ದಾನೆ.

ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಳಿಕ ಹಮ್ಜಾ ತಂದೆಯಿಂದ ಬೇರೆಯಾಗಿದ್ದ. ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಆತ 28 ವರ್ಷದವನಾಗಿದ್ದು, ಅಲ್'ಖೈದಾದ ಉತ್ತರಾಧಿಕಾರಿಯಾಗಲು ಸಿದ್ಧನಾಗಿದ್ದಾನೆ.

ಐಸಿಸ್ ಸಂಘಟನೆ ದುರ್ಬಲವಾಗಿರುವುದರ ಲಾಭ ಪಡೆದುಕೊಂಡು ವಿಶ್ವದೆಲ್ಲೆಡೆ ಸಂಘಟನೆಯನ್ನು ಬಲಗೊಳಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow Us:
Download App:
  • android
  • ios