ಸಮಾನ ಹುದ್ದೆ- ಸಮಾನ ಪಿಂಚಣಿ ವ್ಯವಸ್ತೆಯನ್ನು ಜಾರಿಗೊಳಿಸುವುದು ನನ್ನ ಕನಸಾಗಿತ್ತು, ನಾನದನ್ನು ನನಸಾಗಿಸಿದ್ದೇನೆ. ಈಗಾಗಲೇ ಮೊದಲ ಕಂತು ಸೈನಿಕರ ಕೈಸೇರಿದೆ. ಸುಮಾರು 5500 ಕೋಟಿ ರೂಪಾಯಿ ಬಿಡುಗಡೆಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  

ಕಿನ್ನೌರ್, ಹಿಮಾಚಲ ಪ್ರದೇಶ (ಅ.30): ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ಸಮಾನ ಹುದ್ದೆ ಸಮಾನ ಪಿಂಚಣಿಯನ್ನು ಅತೀ ಶೀಘ್ರದಲ್ಲೇ ಜಾರಿಗಗೊಳಿಸಲಾಗುವುದೆಂದು, ಹೇಳಿದ್ದಾರೆ.

ಇಲ್ಲಿ ಇಂಡೋ-ಟಿಬೇಟ್ ಬಾರ್ಡರ್ ಪೊಲೀಸ್ ಪಡೆಯ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ, ಸೈನಿಕರ ತ್ಯಾಗ ಬಲಿದಾನಗಳನ್ನು ಕೊಂಡಾಡಿದ್ದಾರೆ.

ಪ್ರತಿಯೊಬ್ಬರು ತಮ್ಮ ಪ್ರೀತಿಪಾತ್ರರೊಂದಿಗೆ ದೀಪಾವಳಿ ಆಚರಿಸಬಯಸುತ್ತಾರೆ. ಆದುದರಿಂದ ನಾನಿಲ್ಲಿಗೆ ಬಂದಿದ್ದೇನೆ. ಪ್ರಧಾನಿಯಾದ ಬಳಿಕ ನಾನಿದನ್ನು ಆರಂಭಿಸಿಲ್ಲ, 2001ರಲ್ಲಿ ಗುಜರಾತ್ ಭೂಕಂಪ ಸಂತ್ರಸ್ತರೊಂದಿಗೆ ನಾನು ದೀಪಾವಳಿ ಆಚರಿಸಿದ್ದೆ, ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಸಮಾನ ಹುದ್ದೆ- ಸಮಾನ ಪಿಂಚಣಿ ವ್ಯವಸ್ತೆಯನ್ನು ಜಾರಿಗೊಳಿಸುವುದು ನನ್ನ ಕನಸಾಗಿತ್ತು, ನಾನದನ್ನು ನನಸಾಗಿಸಿದ್ದೇನೆ. ಈಗಾಗಲೇ ಮೊದಲ ಕಂತು ಸೈನಿಕರ ಕೈಸೇರಿದೆ. ಸುಮಾರು 5500 ಕೋಟಿ ರೂಪಾಯಿ ಬಿಡುಗಡೆಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸಮಾನ ಹುದ್ದೆ- ಸಮಾನ ಪಿಂಚಣಿಯನ್ನು ಆದಷ್ಟು ಬೇಗ ಜಾರಿಗೊಳಿಸಲು ಆಗ್ರಹಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಗೆ ಕಳೆದ ವಾರ ಪತ್ರ ಬರೆದಿದ್ದರು.