ಚಪ್ಪಲಿ ಶೂಗಳನ್ನ ಕನ್ನಡಕ್ಕೆ ಅವಮಾನ ಮಾಡುವ ರೀತಿಯಲ್ಲಿ ತಯಾರು ಮಾಡಿದ್ದೀರಾ ಅಂತ ಶೋ ರೂಂವೊಂದರಲ್ಲಿ ವಸೂಲಿಗೆ ಇಳಿದಿದ್ದ ಹನ್ನೊಂದು ಮಂದಿಯನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು(ಜು.18): ಚಪ್ಪಲಿ ಶೂಗಳನ್ನ ಕನ್ನಡಕ್ಕೆ ಅವಮಾನ ಮಾಡುವ ರೀತಿಯಲ್ಲಿ ತಯಾರು ಮಾಡಿದ್ದೀರಾ ಅಂತ ಶೋ ರೂಂವೊಂದರಲ್ಲಿ ವಸೂಲಿಗೆ ಇಳಿದಿದ್ದ ಹನ್ನೊಂದು ಮಂದಿಯನ್ನು ಜೆಪಿನಗರ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ, ಕರ್ನಾಟಕ ಸುವರ್ಣ ವೇದಿಕೆ, ಕರ್ನಾಟಕ ಕಾರ್ಮಿಕರ ವೇದಿಕೆ ಸಂಘಟನೆಯ ಮುಖಂಡರಾದ ನಾಗರಾಜ್, ವಿರೇಶ್, ಸಿಟಿ ಪ್ರದೀಪ್ ನಾಯ್ಕ್ ಜೆಪಿ ನಗರದಲ್ಲಿರುವ ಟಾಟಾ ಶೋ ರೂಂನ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕನ್ನಡಕ್ಕೆ ಅವಮಾನ ಮಾಡುವ ರೀತಿಯಲ್ಲಿ ಚಪ್ಪಲಿ, ಶೂಗಳನ್ನ ತಯಾರಿಸುತ್ತಿದ್ದೀರಾ. ಇದು ನೀವು ಕನ್ನಡಕ್ಕೆ ಮಾಡುತ್ತಿರುವ ಅವಮಾನ. ಧರಣಿ, ಪ್ರತಿಭಟನೆ, ಅಂತ ಮಾಲೀಕರಿಗೆ ಸಂಘಟನೆ ಮುಖಂಡರು ಬೆದರಿಕೆ ಹಾಕಿ ಲಕ್ಷ ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.
ಸೋಮವಾರ ಮತ್ತೆ ಬರುತ್ತೇವೆ ಅಷ್ಟರೊಳಗೆ ಹಣ ರೆಡಿ ಮಾಡಿಕೊಂಡಿರಿ ಅಂತ ವಾರ್ನಿಂಗ್ ಕೊಟ್ಟು ಹೋಗಿದ್ದಾರೆ. ಶೋ ರೂಮ್ ನಲ್ಲಿದ ಗ್ರಾಹಕರು ಘಟನೆ ಸಂಬಂಧ ಸಂಘಟಕರ ವಿರುದ್ಧ ಜೆ.ಪಿನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಶೋ ರೂಮ್ ನಲ್ಲಿ ಪೊಲೀಸ್ರು ಸೋಮವಾರ ಮಪ್ತಿನಲ್ಲಿ ಶೂ ರೂಮ್ ಸಿಬ್ಬಂದಿಯಂತೆ ಸಂಘಟನೆಕಾರರನ್ನು ಕಾಯುತ್ತಿದ್ರು.
ಸಂಘಟನೆ ಗಳು ವಸೂಲಿಗೆ ಅಂತ ಶೋ ರೂಮ್ ಎಂಟ್ರಿ ಕೊಟ್ಟು ವಸೂಲಿಗಿಳಿಯುತ್ತಿದ್ದಂತೆ ದಾಳಿ ಮಾಡಿದ ಜೆ.ಪಿನಗರ ಪೊಲೀಸರು ಇಬ್ಬರು ಮುಖಂಡರು ಸೇರಿ ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.
