ಇದೀಗ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿದೆ.
ಚೆನ್ನೈ (ಫೆ.16): ಪಳನಿಸ್ವಾಮಿಗೆ ಸಿಎಂ ಪಟ್ಟ ಖಚಿತವಾಗುತ್ತಿದ್ದಂತೆ, ಪನ್ನೀರ್ ಬಣ ಸಿಡಿದೆದ್ದಿದೆ.
ಹೇಗಾದರೂ ಮಾಡಿ ಶಶಿಕಲಾ ಆಪ್ತ ಪಳನಿಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ನಿರ್ಧರಿಸಿರುವ ಪನ್ನೀರ್ ಬಣ ನಾನಾ ತಂತ್ರಗಳನ್ನು ಮಾಡ್ತಿದೆ.
ಇದೀಗ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಆಯ್ಕೆ ಪ್ರಶ್ನಿಸಿ ಚುನಾವಣಾ ಆಯೋಗದ ಮೊರೆ ಹೋಗಿದೆ.
ಪನ್ನೀರ್ ಸೆಲ್ವಂ ಗುಂಪಿನಲ್ಲಿರುವ ರಾಜ್ಯಸಭಾ ಸದಸ್ಯ ಮೈತ್ರಿಯನ್ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ಅರ್ಜಿ ವಿಚಾರಣೆಗೆ ಆಯೋಗ ಮಾನ್ಯ ಮಾಡಿದೆ. ಇಂದೇ ಇದರ ವಿಚಾರಣೆ ನಡೆದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.