Asianet Suvarna News Asianet Suvarna News

ಬೆಂಗಳೂರಲ್ಲಿ ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕೆ ವಿರೋಧ : ಬೃಹತ್ ಪ್ರತಿಭಟನೆ

ನಮ್ಮ ಬೆಂಗಳೂರು ಫೌಂಡೇಷನ್  ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ 4 ಕಡೆ ಪ್ರತಿಭಟನೆ ನಡೆಯುತ್ತಿದೆ. 

Opposition to the construction of a steel bridge Bangalore

ಬೆಂಗಳೂರು(ಅ.16): ಬಿಡಿಎ ಕೈಗೆತ್ತಿಗೊಂಡಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ನಗರದ ದ ಚಾಲುಕ್ಯ ವೃತ್ತದಲ್ಲಿ ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕೆ ವಿರೋಧಿಸಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ನಮ್ಮ ಬೆಂಗಳೂರು ಫೌಂಡೇಷನ್  ನೇತೃತ್ವದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೂ 4 ಕಡೆ ಪ್ರತಿಭಟನೆ ನಡೆಯುತ್ತಿದೆ. 

ಧರಣಿಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ, ‌ ನಮ್ಮ ಬೆಂಗಳೂರು ಫೌಂಡೇಷನ್​ ಕಾರ್ಯಕರ್ತರು, ಕಲಾವಿದ ಪ್ರಕಾಶ ಬೆಳವಾಡಿ, ಹಲವು ಪರಿಸರವಾದಿಗಳು ಭಾಗಿಯಾಗಿದ್ದಾರೆ. 

ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕಾಗಿ ನಗರದ ನೂರಾರು ಮರ ನಾಶವಾಗುತ್ತಿವೆ.  ಯೋಜನೆಯಲ್ಲಿ ಪಾರದರ್ಶಕತೆ ಕಂಡು ಬರುತ್ತಿಲ್ಲ ಎಂಬುದು ಪರಿಸರವಾದಿಗಳ ಆರೋಪವಾಗಿದೆ. 

ಸ್ಟೀಲ್​ ಬ್ರಿಡ್ಜ್​ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, ನಮ್ಮ ಸಂಸ್ಕೃತಿ ಹಾಳು ಮಾಡಲು ಸರ್ಕಾರ ಮುಂದಾಗಿದೆ  ಎಂದಿದ್ದಾರೆ. 

ಬೆಂಗಳೂರು ನಗರ ಬೆಂಗಳೂರು ನಾಗರಿಕರ ಸ್ವತ್ತ ಆಗಿದ್ದು, ಜನಾಭಿಪ್ರಾಯ ಪಡೆಯದೆ ಸರ್ಕಾರ ಯೋಜನೆಗೆ ಕೈಹಾಕುತ್ತಿದೆ ಎಂದಿರುವ  ಅವರು, ಬಿಲ್ಡರ್ಸ್, ಟಿಂಬರ್ ಮಾಫಿಯಾಗೆ ಸರ್ಕಾರ ನೆರವಾಗುತ್ತಿದೆ, ಸರ್ಕಾರ ವಿದೇಶಿ ಸಂಸ್ಕೃತಿಯನ್ನು ತರಲು ಹೊರಟಿದೆ . ಕೂಡಲೇ ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಡಬೇಕು ಎಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ. 

Follow Us:
Download App:
  • android
  • ios