ಎನ್‌ಡಿಎ ಹೊರತುಪಡಿಸಿದ 9 ಪಕ್ಷಗಳ ಮುಖಂಡರ ಉಪಸಮಿತಿ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.ಈ ಸಮಿತಿ ಮುಂದಿನ ವಾರ ಸಭೆ ಸೇರಲಿದ್ದು, ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದೆ.
ನವದೆಹಲಿ: ಎನ್ಡಿಎ ಹೊರತುಪಡಿಸಿದ 9 ಪಕ್ಷಗಳ ಮುಖಂಡರ ಉಪಸಮಿತಿ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.
ಈ ಸಮಿತಿ ಮುಂದಿನ ವಾರ ಸಭೆ ಸೇರಲಿದ್ದು, ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಪ್ರಮುಖ ವಿಪಕ್ಷ ಕಾಂಗ್ರೆಸ್, ಎಡರಂಗ, ಟಿಎಂಸಿ, ಎಸ್ಪಿ, ಬಿಎಸ್ಪಿ, ಜೆಡಿಯು, ಆರ್ಜೆಡಿ, ಎನ್ಸಿಪಿ, ಡಿಎಂಕೆ ಮುಖಂಡರನ್ನು ಉಪ ಸಮಿತಿ ಒಳಗೊಂಡಿರಲಿದೆ.
ಗುಲಾಂ ನಬಿ ಆಜಾದ್, ಶರದ್ ಯಾದವ್, ಲಾಲು ಸಮಿತಿಯ ಸದಸ್ಯರಾಗಿದ್ದಾರೆ. ಜೂ.14ರಂದು ಆಯೋಗದ ಅಧಿಕೃತ ಅಧಿಸೂಚನೆ ಹೊರಬಿದ್ದ ಬಳಿಕ, ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶಿವಸೇನೆಯಿಂದ ಸ್ವತಂತ್ರ ನಿಲುವು
ಮುಂಬೈ: ರಾಷ್ಟ್ರಪತಿ ಚುನಾವಣೆ ಯಲ್ಲಿ ಬಿಜೆಪಿ ಮಿತ್ರಪಕ್ಷ ಶಿವಸೇನೆ ‘ಸ್ವತಂತ್ರ' ನಿಲುವು ತಳೆಯುವುದಾಗಿ ಹೇಳಿದೆ. ಆದರೆ ರಾಷ್ಟ್ರಪತಿ ಹುದ್ದೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರನ್ನು ಅಭ್ಯರ್ಥಿಯನ್ನಾಗಿ ಸುವ ಬಗ್ಗೆ ತಮ್ಮ ಒತ್ತಾಯ ಮುಂದುವರಿಯುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
