225 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ನೀಡಿ ಕೇಂದ್ರ ಸರ್ಕಾರ ರಾಮಾಯಣ ಮ್ಯೂಸಿಯಂ ನಿರ್ಮಿಸಲು ಮುಂದಾಗಿದೆ. ಆದರೆ ಈ ರಾಮಾಯಣ ಮ್ಯೂಸಿಯಂಗೆ ವಿಪಕ್ಷಗಳು ಅಪಸ್ವರ ಎತ್ತಿವೆ.

ಅಯೋಧ್ಯೆ (ಅ.18): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮೋದಿ ಸರ್ಕಾರ ರಾಮಾಯಣ ಮ್ಯೂಸಿಯಂ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸಿದೆ.

ವಿವಾದಿತ ಅಯೋಧ್ಯೆಯ ರಾಮಜನ್ಮಭೂಮಿ- ಬಾಬ್ರಿ ಮಸೀದಿಯಿಂದ ಸುಮಾರು 15 ಕಿ.ಮೀ ದೂರದಲ್ಲಿ ರಾಮಾಯಣ ಮ್ಯೂಸಿಯಂ ಕಟ್ಟಡ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಯೋಜನೆ​ ಹಾಕಿದೆ.

ಈಗಾಗಲೇ 25 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದ್ದು, ಈ ಸ್ಥಳ ಪರಿಶೀಲನೆಗಾಗಿ ಇವತ್ತು ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

ಕೇಂದ್ರ ಸರ್ಕಾರ 225 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನ ನೀಡಿ ರಾಮಾಯಣ ಮ್ಯೂಸಿಯಂ ನಿರ್ಮಿಸಲು ಮುಂದಾಗಿದೆ. ಆದರೆ ಈ ರಾಮಾಯಣ ಮ್ಯೂಸಿಯಂಗೆ ವಿಪಕ್ಷಗಳು ಅಪಸ್ವರ ಎತ್ತಿವೆ.