ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ವರ್ತಿಸಿದ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು[ಮಾ. 04] ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನರೇಂದ್ರ ಮೋದಿ ಡಿಸ್ಲೆಕ್ಸಿಯಾ [ಕಲಿಕೆಯ ವೇಳೆ ತೊಂದರೆ ಉಂಟುಮಾಡುವ ಕಾಯಿಲೆ] ತಮಾಷೆ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾ ತನ್ನದೆ ಆದ ರೀತಿ ಪ್ರತಿಕ್ರಿಯೆ ನೀಡಿದೆ.
ವಿದ್ಯಾರ್ಥಿನಿಯೊಬ್ಬರು ಮಂಡನೆ ಮಾಡಿದ್ದ ಪ್ರಾಜೆಕ್ಟ್ ಡಿಸ್ಲೆಕ್ಸಿಯಾಗೆ ಸಂಬಂಧಿಸಿದ್ದಾಗಿದ್ದು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ್ದರು. ಇದು 40 ವರ್ಷದ ಮಕ್ಕಳಿಗೂ ನೆರವಾಗುತ್ತದೆಯಾ? ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾ ತನ್ನದೆ ರೀತಿ ಪ್ರತಿಕ್ರಿಯೆ ನೀಡಿತು.
ಉಗ್ರರ ಮೇಲಿನ ದಾಳಿಗೆ ಸಾಕ್ಷಿ ಕೇಳಿದವರಿಗೆ ಮೋದಿ ಕೊಟ್ಟ ಖಡಕ್ ಉತ್ತರ
ಇಲ್ಲಿಯೂ ಮೋದಿ ರಾಜಕಾರಣ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಆಡಿಕೊಂಡಿದ್ದು ಸಿದ್ದರಾಮಯ್ಯ ಆದಿಯಾಗಿ ಬಹಳಷ್ಟು ಜನ ಟ್ವೀಟ್ ಮಾಡಿದ್ದಾರೆ.
