ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು, ಬೆಂಗಳೂರಿನ ಕ್ರಿಯಾಶೀಲ ಗುಣವಿಶೇಷಣಗಳನ್ನು ಪ್ರತಿನಿಧಿಸುವ ಹೊಸ ಮುದ್ರೆ ಹಾಗೂ ಘೋಷವಾಕ್ಯವನ್ನು ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ. ಆ ನಿಟ್ಟಿನಲ್ಲಿ ಮುದ್ರಾವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಸೃಜನಶೀಲ ಕಲ್ಪನೆಯುಳ್ಳವರಿಗೆ ಇಲಾಖೆಯು ಮನವಿ ಮಾಡಿಕೊಂಡಿದೆ.
ಸಾರ್ವಜನಿಕರು ರೂ.5 ಲಕ್ಷ ಬಹುಮಾನ ಗೆಲ್ಲುವ ಅವಕಾಶವನ್ನು ಪ್ರವಾಸೋದ್ಯಮ ಇಲಾಖೆ ಮುಂದಿಟ್ಟಿದೆ. ರೂ. 5 ಲಕ್ಷವನ್ನು ನಿಮ್ಮದಾಗಿಸಬೇಕಾದರೆ, ನೀವು ಮಾಡಬೇಕಾದುದು ಒಂದು ವಿನ್ಯಾಸ ಹಾಗೂ ಘೋಷವಾಕ್ಯವನ್ನು ರಚಿಸಿ ಕಳುಹಿಸಬೇಕು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು, ಬೆಂಗಳೂರಿನ ಕ್ರಿಯಾಶೀಲ ಗುಣವಿಶೇಷಣಗಳನ್ನು ಪ್ರತಿನಿಧಿಸುವ ಹೊಸ ಮುದ್ರೆ ಹಾಗೂ ಘೋಷವಾಕ್ಯವನ್ನು ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಬಗ್ಗೆ ನಿಮ್ಮ ಕಲ್ಪನೆಯೇನು? ಎಂಬುವುದನ್ನು ವಿನ್ಯಾಸಗೊಳಿಸುವ ಮೂಲಕ ಈ ಮುದ್ರಾವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಸೃಜನಶೀಲ ಕಲ್ಪನೆ ಹಾಗೂ ಕಲಾಕೌಶಲ್ಯವುಳ್ಳವರಿಗೆ ಇಲಾಖೆಯು ಮನವಿ ಮಾಡಿಕೊಂಡಿದೆ.
ತಾವು ವಿನ್ಯಾಸಗೊಳಿಸಿದ ಮುದ್ರೆ ಹಾಗೂ ಘೋಷವಾಕ್ಯವನ್ನು ಸಲ್ಲಿಸಲು 25 ಮಾರ್ 2017 ಕೊನೆ ದಿನಾಂಕ.
What does Namma Bengaluru mean to you?Reaching out to the artistic & expressive creative minds to Brand our city. Stand to win Rs 500000 pic.twitter.com/1wGhsWfynh
— Priyank Kharge (@PriyankKharge) March 13, 2017
ಬೆಂಗಳೂರು:
ಬೆಂಗಳೂರು ನಗರ ವಿಶ್ವಕ್ಕೆ ಕೊಟ್ಟ ಕೊಡುಗೆ ಅಪಾರ- ಭವ್ಯ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಸ್ಮಾರಕಗಳು, ವಿಶಿಷ್ಟ ಖಾದ್ಯಗಳು, ಅಮ್ಯೂಸ್’ಮೆಂಟ್ ಪಾರ್ಕ್’ಗಳು, ಗಾಲ್ಫ್ ಕೋರ್ಸ್’ಗಳು, ಸಡಗರ ಭರಿತ ಶಾಪಿಂಗ್ ಮಾಲ್’ಗಳು, ಮನರಂಜನೆ, ವಿಜ್ಞಾನ ಹಾಗೂ ತಂತ್ರಜ್ಞಾನಗಳು, ನವೋದ್ಯಮಗಳು, ರಾಷ್ಟ್ರೀಯೋದ್ಯಾನ, ನಿತ್ಯಹರಿದ್ವರ್ಣ ಸಸ್ಯರಾಶಿ, ಸ್ನೇಹಮಯಿ ಶ್ರೀಸಾಮಾನ್ಯರು ಹಾಗೂ ಇನ್ನೂ ಹಲವು.
ಬೆಂಗಳೂರು ಹಲವು ಉಪಮೆಗಳ ವೈವಿಧ್ಯಮಯನಗರಿ ಹಾಗೂ ಬಗೆಬಗೆಯ ಪ್ರವಾಸಿಗರನ್ನು ಆಕರ್ಷಿಸುವ ಗಮ್ಯ ಸ್ಥಾನ. ನಮ್ಮ ಬೆಂಗಳುರು 480 ವರ್ಷಗಳ ಸುವರ್ಣ ಇತಿಹಾಸದ ನಾಡು. ಒಮ್ಮೆ ಹಲವು ಗ್ರಾಮಗಳ ಪ್ರಾಂತವಾಗಿದ್ದ ಬೆಂಗಳೂರು ಈಗ ಸ್ಪಂದನಶೀಲ ಬಹುಸಂಸ್ಕೃತೀಯ ಮಹಾನಗರವಾಗಿ ಹೊರಹೊಮ್ಮಿದೆ.
ಹೆಚ್ಚಿನ ವಿವರಗಳಿಗೆ http://www.karnatakatourism.org/ ಭೇಟಿ ನೀಡಿ.
