ಮಹಿಳೆ ದೇಹದಲ್ಲಿ ಪತ್ತೆಯಾಯ್ತು 99 ಕಲ್ಲುಗಳು; ವೈದ್ಯರಿಂದ ಆಪರೇಶನ್ ಯಶಸ್ವಿ

Operation Successful in Tumkuru
Highlights

ಮಹಿಳೆಯೊಬ್ಬರ  ದೇಹದಲ್ಲಿ 99 ಕಲ್ಲುಗಳು ಪತ್ತೆಯಾಗಿದ್ದು  ಆಪರೇಷನ್ ಮೂಲಕ  ವೈದ್ಯರು ಕಲ್ಲುಗಳನ್ನು ಹೊರ ತೆಗೆದಿದ್ದಾರೆ. 

ತುಮಕೂರು (ಫೆ. 28): ಮಹಿಳೆಯೊಬ್ಬರ  ದೇಹದಲ್ಲಿ 99 ಕಲ್ಲುಗಳು ಪತ್ತೆಯಾಗಿದ್ದು  ಆಪರೇಷನ್ ಮೂಲಕ  ವೈದ್ಯರು ಕಲ್ಲುಗಳನ್ನು ಹೊರ ತೆಗೆದಿದ್ದಾರೆ. 

45 ವರ್ಷದ ಸಲ್ಮಾ  ಎಂಬುವವರ ದೇಹದಲ್ಲಿ 99 ಕಲ್ಲುಗಳು ಪತ್ತೆಯಾಗಿದ್ದವು. ತುಮಕೂರು ಜಿಲ್ಲಾಸ್ಪತ್ರೆ ವೈದ್ಯ ಡಾ. ವಾಸೀಂ  ಹಾಗೂ ತಂಡದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಹಲವು ದಿನಗಳಿಂದ ಮಹಿಳೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬಂದಿತ್ತು.  ಸ್ಕ್ಯಾನಿಂಗ್ ಮೂಲಕ ವೈದ್ಯರು ಪತ್ತೆ ಹಚ್ಚಿದ್ದರು.  ಬಳಿಕ ಆಪರೇಷನ್ ಮೂಲಕ ಹೊರತೆಗೆದಿದ್ದಾರೆ. 
 

loader