ಬೆಂಗಳೂರು (ಫೆ.09): ನಾಲ್ಕು ಕಾಲುಗಳನ್ನು ಹೊಂದಿದ ಮಗುವಿನ ಶಸ್ತ್ರಚಿಕಿತ್ಸೆಯನ್ನುಆನೇಕಲ್ ನಾರಾಯಣ ಹೆಲ್ತ್ ಸಿಟಿ ವೈದ್ಯರು ನಡೆಸಿದ್ದು, ಆಪರೇಶನ್ ಯಶಸ್ವಿಯಾಗಿದೆ.
ಬೆಂಗಳೂರು (ಫೆ.09): ನಾಲ್ಕು ಕಾಲುಗಳನ್ನು ಹೊಂದಿದ ಮಗುವಿನ ಶಸ್ತ್ರಚಿಕಿತ್ಸೆಯನ್ನುಆನೇಕಲ್ ನಾರಾಯಣ ಹೆಲ್ತ್ ಸಿಟಿ ವೈದ್ಯರು ನಡೆಸಿದ್ದು, ಆಪರೇಶನ್ ಯಶಸ್ವಿಯಾಗಿದೆ.
ಮಗುವಿನ ಹೆಚ್ಚುವರಿ ಎರಡು ಕಾಲುಗಳನ್ನ ಶಸ್ತ್ರ ಚಿಕಿತ್ಸೆಯಿಂದ ಬೇರ್ಪಡಿಸಿದ್ದು ಆಪರೇಷನ್ ಬಳಿಕ ಸಾಮಾನ್ಯ ಮಗುವಂತೆ ಆಗಿದ್ದು, ಆರೋಗ್ಯವಾಗಿದೆ ಎಂದು ಬಗ್ಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ಸುದ್ದಿಗೊಷ್ಟಿಯಲ್ಲಿ ಹೇಳಿದ್ದಾರೆ.
ರಾಯಚೂರಿನ ಲಲಿತಾ ಹಾಗೂ ಚನ್ನಬಸವ ಎಂಬುವವರ ಒಂದು ತಿಂಗಳ ಮಗುವನ್ನು ಜನವರಿ 24 ರಂದು ಆಸ್ಪತ್ರೆಗೆ ದಾಖಲಾಗಿತ್ತು. ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಪೋಷಕರು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದು, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
.