ಬೆಳಗಾವಿ ಬಂಡಾಯದ ನಂತರ ರಾಜ್ಯ ಸರಕಾರಕ್ಕೆ ಬಳ್ಳಾರಿ ಬಂಡಾಯ ಎದುರಾಗಿತ್ತು. ಇದೀಗ 18 ರಿಂದ 22 ಶಾಸಕರು ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಬಮಡಾಯದ ಬಾವುಟ ಮೊದಲು ಹಾರಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಶಾಸದಕರ ತಂಡ ಮುಂಬೈಗೆ ಹಾರಿದೆ. ಹಾಗಾದರೆ ಜಾರಕಿಕೊಳಿ ಜತೆ ತೆರಳಿರುವ ಶಾಸಕರು ಯಾರ್ಯಾರು?

ಬೆಂಗಳೂರು[ಸೆ.20] ಒಂದು ಕಡೆ ಸಿಎಂ ಕುಮಾರಸ್ವಾಮಿ ಮಾತನಾಡುತ್ತ ಬಿಜೆಪಿ ನಾಯಕರು ಏನೂ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೆ ಶಾಸಕರ ಮುಂಬೈ ಪ್ರವಾಸದ ಮಾಹಿತಿಯನ್ನು ಹೇಳಿದ್ದರು. ಕಳೆದ ಒಮದು ತಿಂಗಳಿನಿಂದ ನಡೆಯುತ್ತಿದ್ದ ಪೊಲಿಟಿಕಲ್ ಹೈ ಡ್ರಾಮಾ ಅಂತ್ಯ ಕಾಲ ಹತ್ತಿರವಾಗಿದ್ದು 22 ಶಾಸಕರು ಮುಂಬೈ ಸೇರಿರುವುದು ಪಕ್ಕಾ ಆಗಿದೆ.

ಒಂದು ಕಡೆ ಮನೆಯಿಂದ ಹೊರಬಂದು ಮಾತನಾಡಿದ ಬಿಎಸ್‌ ವೈ ಕುಮಾರಸ್ವಾಮಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗಾದರೆ ಮುಂಬೈಗೆ ಹಾರುರುವ ಶಾಸಕರು ಯಾರು? ಯಾವ ಯಾವ ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ? 

"

ಎಚ್‌ಡಿಕೆಗೆ ಅರ್ಧ ಗಂಟೆಯಲ್ಲೇ ಬಿಎಸ್‌ವೈ ಕೊಟ್ಟ ತಿರುಗೇಟು ಎಂಥದ್ದು!

 ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆಡಳಿತ ಪಕ್ಷದ 22 ಶಾಸಕರು ಮುಂಬೈ ತೆರಳಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಹೀರೆಕೆರೂರು ಶಾಸಕ ಬಿಸಿ ಪಾಟೀಲ್ ಸಹ ರಮೇಶ್ ಜಾರಕೊಹೊಳಿ ಜತೆಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಂಧಾನವೂ ವ್ಯರ್ಥವಾಗಿದೆ.

ಕೆಲ ಜೆಡಿಎಸ್ ಶಾಸಕರು ಈ ಗುಂಪಿನಲ್ಲಿ ಇರುವುದನ್ನು ಜೆಡಿಎಸ್ ಅರಗಿಸಿಕೊಳ್ಳಲೇಬೇಕು. ಬಳ್ಳಾರಿ, ಕೋಲಾರ ಸೇರಿದಂತೆ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಕದ ಶಾಸಕರಿದ್ದಾರೆ.