ಬೆಂಗಳೂರು[ಸೆ.20] ಒಂದು ಕಾಲದಲ್ಲಿ ಒಟ್ಟಾಗಿ ಸರಕಾರ ಮಾಡಿದ್ದ ಬಿಎಸ್‌ ವೈ ಮತ್ತು ಕುಮಾರಸ್ವಾಮಿ ಇದೀಗ ಬೆಂಕಿ ಬಿರುಗಾಳಿಯಾಗಿದ್ದಾರೆ. ನಿಮ್ಮ ಬಳಿ ಅಧಿಕಾರವಿದೆ ಎಂದು ಸಲ್ಲದ ತನಿಖೆ ಮಾಡುತ್ತೀರಾ? ಮಾಡಿ ನಮ್ಮ ಬಳಿಯೂ ಸರಕಾರವಿದೆ. ಕೇಂದ್ರದಲ್ಲಿ ನಾವೇ ಅಧಿಕಾರದಲ್ಲಿದ್ದೇವೆ ನೆನಪಿರಲಿ ಎಂದಿದ್ದಾರೆ.

ಮಧ್ಯಾಹ್ನ 4 ಗಂಟೆಗೆ ತುರ್ತು ಪತ್ರಿಕಾ ಗೋಷ್ಠಿ ನಡೆಸಲಿರುವ ಬಿಎಸ್‌ ವೈ ಇನ್ನಷ್ಟು ಮಾಹಿತಿ ಬಹಿರಂಗ ಮಾಡಲಿದ್ದಾರೆ. ಮಾತನಾಡುವ ನೈತಿಕತೆ ಇರದ ಕುಮಾರಸ್ವಾಮಿ ಆರೋಪಗಳಿಗೆ  ಉತ್ತರ ನೀಡಲೇಬೇಕಾಗಿಲ್ಲ. ಶಿವರಾಮ ಕಾರಂತ ಬಡಾವಾಣೆ ವಿಚಾರ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರಲ್ಲ ಎಂದಿದ್ದಾರೆ. ನಿಮ್ಮ ಕುಟುಂಬ ಮಾಡಿದಷ್ಟು ದ್ರೋಹ, ಈ ಸೇಡಿನ ರಾಜಕಾರಣ ಬಹಳ ಕಾಲ ನಡೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ರಾಜ್ಯ ರಾಜಕಾರಣದಕಲ್ಲಿ ಬಿರುಸಿನ ಚಟುವಟಿಕೆ ಮತ್ತಷ್ಟು ಜೋರಾಗಿದೆ. ಇನ್ನೊಂದು ಕಡೆ 22 ಶಾಸಕರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದ್ದು ಮೈತ್ರಿ ಸರಕಾರದ ಭವಿಷ್ಯ ನಿರ್ಧಾರವಾಗಲಿದೆಯೇ? ಎಂಬ ಪ್ರಶ್ನೆ ಸಹ ಮೂಡಿದೆ.

"

 

"