ಗಂಗಾ ಶುದ್ಧೀಕರಣದ ಹೆಸರಿನಲ್ಲಿ ಹಣ ಹಾಗೂ ಸಂಪನ್ಮೂಲಗಳು ಪೋಲಾಗುತ್ತಿವೆಯೆಂದು  ನ್ಯಾಯಾಧೀರಣವು ಛೀಮಾರಿ ಹಾಕಿದೆ.

ನವದೆಹಲಿ (ಫ.07): ಗಂಗಾ ನದಿ ಶುದ್ಧಿಗೆಂದು ರಚಿಸಲಾಗಿರುವ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಶನ್ (ಎನ್ಎಂಸಿಜಿ)ಯನ್ನು ಹಸಿರು ನ್ಯಾಯಾಧಿಕರಣವು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಗಂಗಾ ಶುದ್ಧೀಕರಣದ ಹೆಸರಿನಲ್ಲಿ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಶನ್'ನಿಂದ ಹಣ ಹಾಗೂ ಸಂಪನ್ಮೂಲಗಳನ್ನು ಪೋಲಾಗುತ್ತಿದೆಯೆಂದು ನ್ಯಾಯಾಧಿರಣವು ಛೀಮಾರಿ ಹಾಕಿದೆ.

ಸರ್ಕಾರದ ಅಂಗಸಂಸ್ಥೆಗಳ ನಡುವೆಯೇ ಸಂವಹನದ ಕೊರೆತೆಯಿದೆ. ಮಾಲಿನ್ಯ ಹೆಚ್ಚಿಸುವ ಉದ್ಯಮಗಳಿಗೆ ಕಡಿವಾಣ ಹಾಕುವ ಯೋಜನೆಯನ್ನೇಕೆ ರೂಪಿಸಿಲ್ಲ? ಎಂದು ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಪ್ರಶ್ನಿಸಿದೆ.

ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಯೂ ಯಾವುದೇ ಫಲಿತಾಂಶವಿಲ್ಲ. ಸಂಸ್ಥೆಯು ಹಣ ಪೋಲು ಮಾಡುತ್ತಿದೆಯೆಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ಗಂಗಾವನ್ನು ಶುದ್ಧೀಕರಿಸುವ ನಮಮಿ ಗಂಗಾ ಯೋಜನೆಗೆ ಕೇಂದ್ರ ಸರ್ಕಾರವು ಸುಮಾರು 2000 ಕೋಟಿ ರೂ. ಅನುದಾನ ನೀಡಿದೆ.