ವೆರಾವಲ್ [ನ.02]: ಇಲ್ಲಿನ ಮತದಾನ ಕೇಂದ್ರದ ಏಕಮಾತ್ರ ಮತದಾರ ಎಂಬ ದಾಖಲೆ ಹೊಂದಿದ್ದ ಪ್ರಭು ಮಹಂತ್ ಭರತ್‌ದಾಸ್ ಬಾಪು ವಯೋಸ ಹಜ ಕಾಯಿಲೆಯಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. 

ಪ್ರತಿಯೊಬ್ಬ ಮತದಾರನೂ ತನ್ನ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ 2 ಕಿ.ಮೀ ವ್ಯಾಪ್ತಿಯೊಳಗೆ ಮತದಾನ ಕೇಂದ್ರಗಳಿರಬೇಕು ಎಂಬುದು ಚುನಾವಣಾ ಆಯೋಗದ ನಿಲುವು. 

ಈ ಹಿನ್ನೆಲೆ ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿರುವ ಆಶ್ರಮ ಹಾಗೂ ಶಿವನ ದೇವಸ್ಥಾನದಲ್ಲಿ ವಾಸವಿರುವ ಏಕಮಾತ್ರ ಮತದಾರ ಮಹಂತ್ ಭರತ್‌ದಾಸ್ ಅವರಿಗಾಗಿಯೇ ಚುನಾವಣಾ ಆಯೋಗ ಪ್ರತೀ ಚುನಾವಣೆ ಸಂದರ್ಭದಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿತ್ತು.

ವೋಟರ್‌ ಐಡಿಗೂ ಇನ್ಮುಂದೆ ಆಧಾರ್‌ ಲಿಂಕ್‌?.. 

ಇದೀಗ ಏಕೈಕ ಮತದಾರರಾಗಿದ್ದ ಆಶ್ರಮವಾಸಿಯಾಗಿದ್ದ ದಾಖಲೆ ಮಾಡಿದ್ದ ಭರತ್ ಅವರು ಕೊನೆಯುಸಿರೆಳೆದಿದ್ದಾರೆ.