ತಮಿಳುನಾಡಿನಲ್ಲಿ ಒಬ್ಬರೇ ಅಮ್ಮ, ಒಬ್ಬರೇ ಎಂಜಿಆರ್ ಅವರ ಸ್ಥಾನಕ್ಕೆ ಇನ್ಯಾರೂ ಕೂಡ ಬರಲು ಸಾಧ್ಯವಿಲ್ಲ ಎಂದು ಟಿಟಿವಿ ದಿನಕರನ್ ಕೂಡ ರಜನಿ ರಾಜಕೀಯ ಪ್ರವೇಶದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ(ಡಿ.31): ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಆರಂಭವಾಗಿದೆ. ಇಂದು ಹೊಸ ಪಕ್ಷ ಘೋಷಣೆ ಮಾಡುವ ಮೂಲಕ ರಜನಿಕಾಂತ್ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ.

ಒಂದೆಡೆ ರಜನಿ ಅಭಿಮಾನಿಗಳು ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ಸಂಭ್ರಮಾಚರಣೆ ಮಾಡುತ್ತಿದ್ದರೆ ಇನ್ನೊಂದೆಡೆ ಟೀಕೆಗಳು ಕೇಳಿ ಬರುತ್ತಿದೆ. ಸುಬ್ರಮಣಿಯನ್ ಸ್ವಾಮಿ ರಜನಿಕಾಂತ್ ಓರ್ವ ಅನಕ್ಷರಸ್ಥ, ಗೊತ್ತುಗುರಿ ಇಲ್ಲದ ವ್ಯಕ್ತಿ ಎಂದ ಬೆನ್ನಲ್ಲೇ ಇತ್ತ ಟಿಟಿವಿ ದಿನಕರನ್ ಕೂಡ ರಜನಿ ರಾಜಕೀಯ ಪ್ರವೇಶದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಒಬ್ಬರೇ ಅಮ್ಮ, ಒಬ್ಬರೇ ಎಂಜಿಆರ್ ಅವರ ಸ್ಥಾನಕ್ಕೆ ಇನ್ಯಾರೂ ಕೂಡ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರೊಂದಿಗೆ ಯಾರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ರಜನಿ ರಾಜಕೀಯ ಪ್ರವೇಶವನ್ನು ವ್ಯಂಗ್ಯ ಮಾಡಿದ್ದಾರೆ.