ನವದೆಹಲಿ (ಫೆ.08): ರೈನ್ ಕೋಟ್ ಧರಿಸಿ ಸ್ನಾನ ಮಾಡುವ ಕಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗ್ ಮಾತ್ರ ಸಿದ್ಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿಂದು ವ್ಯಂಗ್ಯವಾಡಿದ್ದಾರೆ.

ನವದೆಹಲಿ (ಫೆ.08): ರೈನ್ ಕೋಟ್ ಧರಿಸಿ ಸ್ನಾನ ಮಾಡುವ ಕಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗ್ ಮಾತ್ರ ಸಿದ್ಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿಂದು ವ್ಯಂಗ್ಯವಾಡಿದ್ದಾರೆ.

ನೋಟು ನಿಷೇಧದ ಬಗ್ಗೆ ಸದಾ ಕಿಡಿಕಾರುತ್ತಿರುವ ಕಾಂಗ್ರೆಸ್’ಗೆ ತಿರುಗೇಟು ನೀಡುತ್ತಾ, ಮನಮೋಹನ್ ಸಿಂಗ್ ವಿರುದ್ಧ ಸಾಕಷ್ಟು ಹಗರಣಗಳು ಸುತ್ತಿಕೊಂಡಿವೆ. ಆದರೂ ಅವರ ಸ್ವಂತ ಇಮೇಜ್ ಶುದ್ಧವಾಗಿಯೇ ಇದೆ. ಅವರೊಬ್ಬರಿಗೇ ಗೊತ್ತು ರೈನ್ ಕೋಟ್ ಧರಿಸಿಕೊಂಡು ಮೈನೆನೆಯದಂತೆ ಸ್ನಾನ ಮಾಡುವ ಕಲೆ ಎಂದು ಮೋದಿ ರಾಜ್ಯಸಭೆಯಲ್ಲಿಂದು ವ್ಯಂಗ್ಯವಾಡಿದ್ದಾರೆ.

ಇದರಿಂದ ಕೆರಳಿದ ಕಾಂಗ್ರೆಸ್ ಸಂಸದರು ಸಂಸತ್ತಿನಿಂದ ಹೊರನಡೆದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಮಾತನಾಡಲು ಮನಮೋಹನ್ ಸಿಂಗ್ ನಿರಾಕರಿಸಿದರು.

ಮೋದಿಯವರ ಈ ಟೀಕೆಗೆ ಪ್ರತಿಕ್ರಿಯಿಸಿರುವ ಚಿದಂಬರಂ, ಯೋಗ್ಯರಲ್ಲದ ಪ್ರಧಾನಿ ಮಾತ್ರ ಮಾಜಿ ಪ್ರಧಾನಿ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡುತ್ತಾರೆ. ಈ ಹಿಂದೆ ಯಾವ ಪ್ರಧಾನಿಯು ಮಾಜಿ ಪ್ರಧಾನಿಗೆ ಈ ರೀತಿ ಟೀಕೆ ಮಾಡಿರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.