ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ಸಂಭವಿಸಿ 22 ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ನವದೆಹಲಿ(ಸೆ.30): ಭಾರತದ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೂ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಮೃತರಾದವರಿಗೂ ಏನು ಸಂಬಂಧ ಎನ್ನುತ್ತೀರಾ ? ಹೌದು ಮುಖ್ಯವಾದ ಸಂಬಂಧ ಇದೆ.

ರಾಜ್ಯಸಭಾ ಸದಸ್ಯರಾದ ಸಚಿನ್ ತೆಂಡೂಲ್ಕರ್ ರೈಲ್ವೆ ಪ್ಲಾಟ್'ಫಾರ್ಮ'ನಲ್ಲಿನ ಸೇತುವೆಯಲ್ಲಿ ಸಂಚರಿಸುವ ಜನಜಂಗುಳಿಯ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪವೆತ್ತಿದ್ದರು. 2016ರಲ್ಲಿ ಸಚಿನ್ ಅವರು ರಾಜ್ಯಸಭೆಯಲ್ಲಿ ಮುಂಬೈನ ಎಲ್ಪಿನ್'ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಸಂಚರಿಸಲು ಕೇವಲ ಒಂದು ಸೇತುವೆ ಮಾತ್ರವಿದೆ. ಪೀಕ್ ಅವಧಿಯಲ್ಲಿ ಈ ಸೇತುವೆಯಲ್ಲಿ ಅತೀ ಹೆಚ್ಚು ಮಂದಿ ತೆರಳುತ್ತಿತ್ತು,ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಈ ಬಗ್ಗೆ ಗಮನಹರಿಸಿ ಹೆಚ್ಚುವರಿ ಸೇತುವೆಗಳನ್ನು ನಿರ್ಮಿಸಬೇಕು ಎಂದು' ಇಲಾಖೆಯ ಗಮನಕ್ಕೆ ತಂದಿದ್ದರು.

ಇದೇ ಆಗಸ್ಟ್'ನಲ್ಲಿ ತೆಂಡೂಲ್ಕರ್ ಅವರ ಪ್ರಶ್ನೆಗೆ ರೈಲ್ವೆ ಸಚಿವರು ಪ್ರತಿಕ್ರಿಯೆ ನೀಡಿ, ಮೇಲ್ಸೇತುವೆ ನಿರ್ಮಿಸುವುದಾಗಿ ಉತ್ತರ ನೀಡಿದ್ದರು. ಆದರೆ ಸಚಿವರ ಮಾತು ಕೇಲವ ಭರವಸೆಯಾಗಿಯೇ ಉಳಿಯಿತು. ಹಿಂದಿನ ರೈಲ್ವೆ ಮಂತ್ರಿ ಸುರೇಶ್ ಪ್ರಭು ಅವರ ಕಾಲದಲ್ಲಿ ಸೇತುವೆ ನಿರ್ಮಾಣಕ್ಕೆ 11.86 ಕೋಟಿ ಬಿಡುಗಡೆಯಾಗಿದ್ದರೂ ಕಾಮಗಾರಿ ಇನ್ನು ಆರಂಭವಾಗಿರಲಿಲ್ಲ.

23 ಮಂದಿ ಸಾವು

ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ಸಂಭವಿಸಿ 22 ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.