‘ಭಾವನೆಗಳ ಅಲೆಯಲ್ಲಿ ತೇಲದಿರಿ, ಸಂವಿಧಾನದ ಪ್ರಕಾರ ಸರ್ಕಾರ ನಡೆಸಿ’!

Only constitution should govern: Asaduddin Owaisi
Highlights

ಸರ್ಕಾರ ನಡೆಯಬೇಕಿರುವುದು ಸಂವಿಧಾನದ ಆಧಾರದ ಮೇಲೆ

ಎಐಎಂಐಎಂ ಮುಖ್ಯಸ್ಥ ಅಸದಿದ್ದೀನ್ ಒವೈಸಿ ಹೇಳಿಕೆ

ಕಾನೂನು ಮತ್ತು ನಿಯಮಗಳೇ ಸರ್ಕಾರಕ್ಕೆ ಆಧಾರ

ಭಾವನೆಗಳ ಆಧಾರದ ಮೇಲೆ ನಡೆದರೆ ಅರಾಜಕತೆ

ಹೈದರಾಬಾದ್(ಜು.25): ಭಾರತದಲ್ಲಿ ಸರ್ಕಾರಗಳು ಸಂವಿಧಾನ, ಕಾನೂನು ಮತ್ತು ನಿಯಮಗಳ ಆಧಾರದ ಮೇಲೆ ಕಾರ್ಯ ನಡೆಸಬೇಕೆ ಹೊರತು, ಅಲ್ಪ ಸಂಖ್ಯಾತ, ಬಹು ಸಂಖ್ಯಾತ ಎಂಬ ಭಾವನೆಗಳ ಆಧಾರದ ಮೇಲಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಭಾರತ ಸರ್ಕಾರ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಅವಶ್ಯಕತೆಯಿರುವುದು ಸಂವಿಧಾನ ಕಾನೂನು ಮತ್ತು ನಿಯಮಗಳು. ಆದರೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಭಾವನೆಗಳ ಮೇಲೆ ಸರ್ಕಾರ ನಡೆಸಿದರೆ ಅರಾಜಕತೆ ಉಂಟಾಗುತ್ತದೆ ಎಂದು ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನದ 21ನೇ ವಿಧಿ, ಮಾನವೀಯತೆಯನ್ನು ಸಾರುತ್ತದೆ. ಅದರ ಪ್ರಕಾರ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ. ಮನುಷ್ಯರು ಮತ್ತು ಹಸುಗಳು ನನಗೆ ಸಮಾನ ಮಹತ್ವ ಎಂದು ಉತ್ತರ ಪ್ರಪದೇಶ ಸಿಎಂ ಯೋಗಿ ಆದಿತ್ಯನಾಥ್  ಹೇಳಿಕೆ ಉಲ್ಲೇಖಿಸಿ ಒವೈಸಿ ಈ ಹೇಳಿಕೆ ನೀಡಿದ್ದಾರೆ.

loader