Asianet Suvarna News Asianet Suvarna News

ಭಾರತದಲ್ಲಿ ಆದಾಯ ತೆರಿಗೆ ಪಾವತಿಸುವವರು ಶೇ.1 ಮಾತ್ರ: ನೀತಿ ಆಯೋಗ ಸಿಇಓ

ಭಾರತದಲ್ಲಿ 1 ಬಿಲಿಯನ್’ಕ್ಕಿಂತಲೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ, ಒಂದು ಬಿಲಿಯನ್’ಕ್ಕಿಂತ ಹೆಚ್ಚು ಮಂದಿ ಆಧಾರ್ ಹೊಂದಿದ್ದಾರೆ,  26 ಕೋಟಿ ಮಂದಿ ಜನ-ಧನ ಯೋಜನೆಯಡಿ ಖಾತೆ ಹೊಂದಿದ್ದಾರೆ, ಹಾಗೂ 26 ಕೋಟಿ ರೂಪೇ ಕಾರ್ಡ್’ಗಳನ್ನು ವಿತರಿಸಲಾಗಿದೆ, ಎಂದಿರುವ ಕಾಂತ್, ನಗದು-ರಹಿತ ರ್ಥಿಕತೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Only 1 percent pay Income Tax in India says NITI Ayog CEO

ನವದೆಹಲಿ (ಡಿ.21): 125 ಕೋಟಿ ಭಾರತೀಯರ ಪೈಕಿ ಕೇವಲ ಶೇ.1ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್’ಡಿಆರ್’ಎಫ್) ಆಯೋಜಿಸದ್ದ ನಗದು-ರಹಿತ ವ್ಯವಹಾರಗಳ ಬಗ್ಗೆ ಕಾರ್ಯಾಗಾರವೊಮದರಲ್ಲಿ ಭಾಗವಹಿಸಿ ಮಾತನಾಡಿದ ಕಾಂತ್, ಶೇ.95ರಷ್ಟು ನಗದು ಆರ್ಥಿಕತೆಯೊಂದಿಗೆ ದೇಶವು ಹೆಚ್ಚು ಪ್ರಗತಿ ಸಾಧಿಸುವುದು ಕಷ್ಟವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ 1 ಬಿಲಿಯನ್’ಕ್ಕಿಂತಲೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ, ಒಂದು ಬಿಲಿಯನ್’ಕ್ಕಿಂತ ಹೆಚ್ಚು ಮಂದಿ ಆಧಾರ್ ಹೊಂದಿದ್ದಾರೆ,  26 ಕೋಟಿ ಮಂದಿ ಜನ-ಧನ ಯೋಜನೆಯಡಿ ಖಾತೆ ಹೊಂದಿದ್ದಾರೆ, ಹಾಗೂ 26 ಕೋಟಿ ರೂಪೇ ಕಾರ್ಡ್’ಗಳನ್ನು ವಿತರಿಸಲಾಗಿದೆ, ಎಂದಿರುವ ಕಾಂತ್, ನಗದು-ರಹಿತ ರ್ಥಿಕತೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios