ರೈಲ್ವೆ ಪಾರ್ಕಿಂಗ್, ಕೂಲಿಗಳ ಆನ್’ಲೈನ್ ಬುಕಿಂಗ್

news | Saturday, January 13th, 2018
Suvarna Web Desk
Highlights

ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು, ಪಾರ್ಕಿಂಗ್ ಕಾಯ್ದಿರಿಸುವಿಕೆ, ಕೂಲಿಗಳ ವ್ಯವಸ್ಥೆ, ವ್ಹೀಲ್ ಚೇರ್ ಎಲ್ಲವನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿ ಸುವಂತಹ ‘ಆರ್-ಟ್ರ್ಯಾಕ್’ ಸೇವೆ ಶೀಘ್ರದಲ್ಲೇ ಜಾರಿಗೆ ತರಲಿದೆ.

ಬೆಂಗಳೂರು (ಜ.13): ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು, ಪಾರ್ಕಿಂಗ್ ಕಾಯ್ದಿರಿಸುವಿಕೆ, ಕೂಲಿಗಳ ವ್ಯವಸ್ಥೆ, ವ್ಹೀಲ್ ಚೇರ್ ಎಲ್ಲವನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿ ಸುವಂತಹ ‘ಆರ್-ಟ್ರ್ಯಾಕ್’ ಸೇವೆ ಶೀಘ್ರದಲ್ಲೇ ಜಾರಿಗೆ ತರಲಿದೆ.

ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಮೊದಲ ಬಾರಿಗೆ ‘ಆರ್-ಟ್ರ್ಯಾಕ್’ ಎಂಬ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ದೇಶದಲ್ಲೇ ‘ಆರ್-ಟ್ರ್ಯಾಕ್’ ವ್ಯವಸ್ಥೆ ಹೊಂದಿದ್ದ ಮೊದಲ ರೈಲ್ವೆ ಪೊಲೀಸ್ ಎಂಬ ಹೆಗ್ಗಳಿಕೆಗೆ ಕರ್ನಾಟಕ ರೈಲ್ವೆ ಪೊಲೀಸ್ ಇಲಾಖೆ ಪಾತ್ರವಾಗಲಿದೆ. ಮೊದಲ ಹಂತದಲ್ಲಿ 2 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರಯೋಗಿಕ ವಾಗಿ ಜಾರಿಗೆ ತರಲಾಗುತ್ತಿದೆ. ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬೆಳಗಾವಿ, ತುಮಕೂರಿನಲ್ಲಿ ‘ಆರ್-ಟ್ರ್ಯಾಕ್’ ಯೋಜನೆ ಜಾರಿಗೆ ಬರಲಿದೆ.

ರೈಲ್ವೆ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸು ತ್ತಿದ್ದರು. ನೂರಾರು ವಾಹನಗಳು ಪಾರ್ಕಿಂಗ್ ಮಾಡುವುದರಿಂದ ಬಳಿಕ ಬಂದ ಸವಾರರಿಗೆ ವಾಹನ ನಿಲುಗಡೆ ಮಾಡಲು ಸ್ಥಳ ಇಲ್ಲದೆ, ಬಳಿಕ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಪರಿಸ್ಥಿತಿ ಇದೆ.

ಇದರಿಂದ ಆ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದಲ್ಲದೆ, ಇತರ ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ, ಪ್ರಯಾಣಿಕರು ತಮ್ಮ ಸರಕುಗಳನ್ನು ಹೊರಲು ಹಮಾಲಿಗಳು ಹಾಗೂ ವೃದ್ಧರಿಗೆ ವ್ಹೀಲ್ ಚೇರ್ ತರಲು ಹುಡುಕಾಟ ನಡೆಸುವಂತಹ ಪರಿಸ್ಥಿತಿ ಇದೆ. ಈ ಎಲ್ಲಾ ಅಂಶಗಳನ್ನು ಮನಗೊಂಡ ಕರ್ನಾಟಕ ರೈಲ್ವೆ ಪೊಲೀಸರು ‘ಆರ್-ಟ್ರ್ಯಾಕ್’ ಎಂಬ ಯೋಜನೆ ಜಾರಿಗೆ ಮುಂದಾಗಿದ್ದಾರೆ.

ಅಂಗೈಯಲ್ಲೇ ಸಿಗಲಿದೆ ಮಾಹಿತಿ: ‘ಆರ್-ಟ್ರ್ಯಾಕ್’ ಯೋಜನೆ ಯಡಿ ‘ಐ ಪಾರ್ಕಿಂಗ್’ (ಇಂಟಲಿಜೆನ್ಸ್ ಟ್ರಾಫಿಕ್ ಸಿಸ್ಟಮ್) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರು ಮೊದಲು ಈ ತಂತ್ರಾಂಶದ ಆ್ಯಪ್ ಡೌನ್‌ಲೋಡ್ ಲೋಡ್ ಮಾಡಿಕೊಳ್ಳಬೇಕು. ಅಲ್ಲಿ ಹೆಸರು ಮತ್ತು ಟಿಕೆಟ್‌ನ ಪಿಎನ್‌ಆರ್ ಸಂಖ್ಯೆ ನಮೂದಿಸಿ ನಿಲ್ದಾಣಗಳಲ್ಲಿ ಲಭ್ಯತೆ ಇರುವ ಪಾರ್ಕಿಂಗ್ ಜಾಗ ನೋಡಬೇಕು. ಹಾಗೆಯೇ ಎಷ್ಟು ಸಮಯಕ್ಕೆ ಪಾರ್ಕಿಂಗ್ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ನಂತರ ಲಭ್ಯತೆ ಆಧರಿಸಿ ಪಾರ್ಕಿಂಗ್‌ಗೆ ಮುಂಗಡ ಜಾಗ ಕಾಯ್ದಿರಿಸಿಕೊಳ್ಳಬಹುದು.

ಇದೇ ವೇಳೆ ಹೆಚ್ಚಿನ ಲಗೇಜ್ ಹಾಗೂ ವೃದ್ಧರು ಇದ್ದರೆ ಈ ಬಗ್ಗೆ ಆನ್‌ಲೈನ್ ಮಾಹಿತಿಯಲ್ಲಿ ಉಲ್ಲೇಖಿ ಸಬೇಕು. ಇವುಗಳ ಆಧಾರದ ಮೇಲೆ ಪಾರ್ಕಿಂಗ್ ಲಭ್ಯತೆ, ಹಮಾಲಿಗಳು, ವೃದ್ಧರು ಹಾಗೂ ಅಂಗವಿಕಲರಿಗೆ ಅವರು ಪಾರ್ಕಿಂಗ್ ಸ್ಥಳಕ್ಕೆ ಬರುವ ಷ್ಟರಲ್ಲಿ ಅವರಿಗೆ ಬೇಕಾದ ಸೇವೆ ಲಭ್ಯವಿರಲಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಂದಿನ ಏಪ್ರಿಲ್ ವೇಳೆಗೆ ಕೆಲಸ ಅಂತಿಮವಾಗಲಿದೆ. ತಂತ್ರಾಂಶವನ್ನು ಶೀಘ್ರವೇ ಬಿಡುಗಡೆ ಮಾಡಲಾಗು ವುದು ಎಂದು ಕರ್ನಾಟಕ ರೈಲ್ವೆ ಇಲಾಖೆ ಎಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನುರಿತ ತಜ್ಞರಿಂದ ತರಬೇತಿ: ನಿತ್ಯ ಒಂದು ತಾಸಿನಂತೆ ಒಂದು ತಿಂಗಳ ಕಾಲ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ, ಯಶವಂತಪುರ ಮತ್ತು ಮೈಸೂರು ನಿಲ್ದಾಣಗಳಲ್ಲಿ ನುರಿತ ತಜ್ಞರಿಂದ ತಂತ್ರಾಂಶದ ಬಗ್ಗೆ ತರಬೇತಿಗೊಳಿಸಲಾಗುತ್ತದೆ. ಲಭ್ಯತೆ ಇರುವ ಪೊಲೀಸ್ ಸಿಬ್ಬಂದಿಯೇ ಇದರ ನಿರ್ವಹಣೆ ಮಾಡಲಿದ್ದಾರೆ. ರೈಲ್ವೆ ನಿಲ್ದಾಣದಲ್ಲಿನ ಹಮಾಲಿಗಳು, ಟ್ಯಾಕ್ಸಿ ಚಾಲಕರು, ಸಾರ್ವಜನಿಕರು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದು, ಈ ಬಗ್ಗೆ ಜನತೆಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ.

Comments 0
Add Comment

    ಎಚ್ ಡಿಕೆಯನ್ನು ಡಮ್ಮಿ ಸಿಎಂ ಮಾಡೋ ಪ್ಲಾನ್ ಹಾಕಿದೆಯಾ ಕಾಂಗ್ರೆಸ್?

    karnataka-assembly-election-2018 | Monday, May 28th, 2018